Advertisements

ಇಳಿವಯಸ್ಸಿನಲ್ಲೂ ಪಿಎಚ್.ಡಿ ಪೂರ್ಣ

ಧಾರವಾಡ: ಧಾರವಾಡದ ಮಾರ್ಕಂಡೇಯ ದೊಡ್ಡಮನಿ ಅವರು ತಮ್ಮ 89ನೇ ವಯಸ್ಸಿನಲ್ಲಿ ಪಿಎಚ್ಡಿ ಪೂರ್ಣಗೊಳಿಸಿದ್ದಾರೆ. ದೊಡಮನಿ ಮಾರ್ಕಂಡೇಯ ಯಲ್ಲಪ್ಪ ಮಂಡಿಸಿದ ‘ಶಿವಶರಣ ಡೋಹರ ಕಕ್ಕಯ್ಯ: ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ.
ಇಳಿ ವಯಸ್ಸಿನಲ್ಲೂ ದೊಡಮನಿ ಅವರು 18 ವರ್ಷ ಅಧ್ಯಯನ ನಡೆಸಿದ್ದಾರೆ. 2006 ನವೆಂಬರಿನಲ್ಲಿ ಪಿಎಚ್.ಡಿ ಅಧ್ಯಯನಕ್ಕೆ ಮಾರ್ಕಂಡೇಯ ಅವರು ನೋಂದಣಿ ಮಾಡಿಸಿದರು. ಆದರೆ, ಮಾರ್ಗದರ್ಶಕರಾಗಿದ್ದ ಕರ್ನಾಟಕ ಕಾಲೇಜಿನ ಪ್ರೊ.ತಳವಾರ ನಿಧನರಾದರು.

ನಂತರ, ಕರ್ನಾಟಕ ವಿವಿಯ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಸಹಾಯಕ ಪ್ರಾಧ್ಯಾಪಕ ನಿಂಗಪ್ಪ ಎನ್.ಹಳ್ಳಿ (ನಿಂಗಪ್ಪ ಮುದೇನೂರು) ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮುಂದುವರಿಸಿದರು. ಮಾರ್ಕಂಡೇಯ ಅವರು ಮಹಾಪ್ರಬಂಧ ಸಿದ್ಧಪಡಿಸಿ ಕಳೆದ ವರ್ಷ ನವೆಂಬರ್ 9ರಂದು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದರು. ಫೆಬ್ರುವರಿ 8ರಂದು ಪದವಿಗೆ ಅಂಗೀಕರಿಸಲಾಯಿತು.

Leave a Comment

Advertisements

Recent Post

Live Cricket Update