Advertisements

ಚಿನ್ನದ ಬಾಂಡ್ ಯೋಜನೆ 5ನೇ ಕಂತು ಖರೀದಿ ಇಂದಿನಿಂದ ಶುರು

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಚಿನ್ನದ ಬಾಂಡ್ ಯೋಜನೆ 5 ನೇ ಕಂತು ಖರೀದಿ ಸೋಮವಾರದಿಂದ ಆರಂಭವಾಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಿನ್ನ ಪ್ರತಿ ಗ್ರಾಂಗೆ 4790 ರೂಪಾಯಿ ನಿಗದಿಪಡಿಸಿದ್ದು, ಇದು ಮಾರುಕಟ್ಟೆಗಿಂತಲೂ ಕಡಿಮೆ ಬೆಲೆಗೆ ಸಿಗುತ್ತಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಚಿನ್ನದ ಬಾಂಡ್ ಯೋಜನೆ 5 ನೇ ಕಂತು ಖರೀದಿ ನಡೆಯಲಿದೆ. ಆಗಸ್ಟ್ 17 ರಂದು ಬಾಂಡ್ ವಿತರಿಸಲಾಗುವುದು. ಆನ್ಲೈನ್ ಮೂಲಕ ಬಾಂಡ್ ಖರೀದಿಗೆ ಅರ್ಜಿ ಸಲ್ಲಿಸುವವರಿಗೆ ಪ್ರತಿ ಗ್ರಾಂನಲ್ಲಿ 50 ರೂ. ವಿನಾಯಿತಿ ನೀಡಲಾಗುವುದು.

ಆಯ್ದ ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಶನ್ ಅಫ್ ಇಂಡಿಯಾ, ಮುಂಬೈ ಷೇರು ವಿನಿಮಯ ಕೇಂದ್ರಗಳಲ್ಲಿ ಬಾಂಡ್ ಮಾರಾಟ ಮಾಡಲಾಗುತ್ತದೆ. ಕನಿಷ್ಠ ಹೂಡಿಕೆ 1 ಗ್ರಾಂ ಇರಲಿದ್ದು ವೈಯಕ್ತಿಕ ಖರೀದಿದಾರರಿಗೆ ಹಾಗೂ ಹಿಂದು ಅವಿಭಕ್ತ ಕುಟುಂಬಕ್ಕೆ 4 ಕೆಜಿ ವರೆಗೆ ಹೂಡಿಕೆ ಮಾಡಬಹುದು. ಟ್ರಸ್ಟ್ ಗಳಿಗೆ 20 ಕೆಜಿ ಹೂಡಿಕೆ ಮಾಡಲು ಅವಕಾಶವಿದೆ.

ಎಸ್ಜಿಬಿಗಳನ್ನು ನಿಗದಿತ ವಾಣಿಜ್ಯ ಬ್ಯಾಂಕುಗಳು (ಸಣ್ಣ ಹಣಕಾಸು ಬ್ಯಾಂಕುಗಳು, ಪಾವತಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್ಸಿಐಎಲ್), ಕ್ಲಿಯರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಸಿಸಿಐಎಲ್), ನಿಯೋಜಿತ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಸ್ಟಾಕ್ ಎಕ್ಸ್ಚೇಂಜ್ಗಳಾದ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್ ಮೂಲಕ ಮಾರಾಟ ಮಾಡ ಲಾಗುತ್ತದೆ.

ಹೂಡಿಕೆ ಮಾಡಲು ಯಾರು ಅರ್ಹರು?

ವೈಯಕ್ತಿಕ ನಿವಾಸಿಗಳು: ಭಾರತೀಯ ನಾಗರಿಕರು ಮತ್ತು ದೇಶದಲ್ಲಿ ವಾಸಿಸುವ ಭಾರತೀಯ ಮೂಲದ ವ್ಯಕ್ತಿಗಳು.

ಹಿಂದೂ ಅವಿಭಜಿತ ಕುಟುಂಬಗಳು (ಎಚ್ ಯುಎಫ್): ಹಿಂದೂ ಕಾನೂನಿನ ಅಡಿಯಲ್ಲಿ ಸಾಂಪ್ರದಾಯಿಕ ಕುಟುಂಬ ಘಟಕಗಳಾಗಿ ಗುರುತಿಸಲಾಗಿದೆ.

ಟ್ರಸ್ಟ್ ಗಳು: ಭಾರತದಲ್ಲಿ ಸರಿಯಾಗಿ ನೋಂದಾಯಿಸಲಾದ ಸಾರ್ವಜನಿಕ ಮತ್ತು ಖಾಸಗಿ ಟ್ರಸ್ಟ್ ಗಳನ್ನು ಒಳಗೊಂಡಿದೆ.

ವಿಶ್ವವಿದ್ಯಾಲಯಗಳು: ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಅಂಗೀಕರಿಸಿದ ಎಲ್ಲಾ ವಿಶ್ವವಿದ್ಯಾಲಯಗಳನ್ನು ಒಳಗೊಂಡಿದೆ.

Leave a Comment

Advertisements

Recent Post

Live Cricket Update