ಲಖನೌ: ಲೇಡಿ ಸಿಂಗಂ ಖ್ಯಾತಿಯ ಉತ್ತರ ಪ್ರದೇಶದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಐಆರ್ ಎಸ್ ಅಧಿಕಾರಿಯೆಂದು ನಂಬಿ ಮದುವೆಯಾದ ವ್ಯಕ್ತಿಯಿಂದಲೇ ಮೋಸ ಹೋಗಿದ್ದಾರೆ.
ಶ್ರೇಷ್ಠಾ ಠಾಕೂರ್ ಉತ್ತರ ಪ್ರದೇಶದ ಖಡಕ್ ಪೊಲೀಸ್ ಅಧಿಕಾರಿ. ಡಿಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಆರ್ ಎಸ್ ಅಧಿಕಾರಿ ಎಂದು ನಂಬಿ ಮದುವೆಯಾದ ಪತಿ ಅಸಲಿಗೆ ಅಧಿಕಾರಿಯೇ ಅಲ್ಲ ಎಂದು ತಿಳಿದುಬಂದಿದೆ.
2012ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಶ್ರೇಷ್ಠಾ ಠಾಕೂರ್ 2018ರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಪರಿಚಯವಾದ ರೋಹಿತ್ ರಾಜ್ ಎಂಬಾತ ನನ್ನು ವಿವಾಹವಾಗಿದ್ದರು. ಆತ ತಾನು ರಾಂಚಿಯಲ್ಲಿ ಡೆಪ್ಯುಟಿ ಕಮಿಷ್ನರ್ ಆಗಿದ್ದು, 2008ರ ಬ್ಯಾಚ್ ನ ಐಆರ್ ಎಸ್ ಅಧಿಕಾರಿ ಎಂದು ಹೇಳಿ ಕೊಂಡಿದ್ದ. ಮದುವೆ ಬಳಿಕ ತನ್ನ ಪತಿ ಐಆರ್ ಎಸ್ ಅಧಿಕಾರಿಯಲ್ಲ ಎಂಬುದು ಶ್ರೇಷ್ಠಾಗೆ ಗೊತ್ತಾಗಿದೆ. ಆದರೆ ಪತಿ ಮಹಾಶಯ ಪತ್ನಿ ಶ್ರೇಷ್ಠಾ ಹೆಸರಲ್ಲೇ ವಂಚನೆ ಮಡಲು ಶುರುಮಾಡಿದ್ದ.
ಇದರಿಂದ ನೊಂದ ಶ್ರೇಷ್ಠಾ ಎರಡು ವರ್ಷಗಳ ಬಳಿಕ ವಿಚ್ಛೇದನ ಪಡೆದುಕೊಂಡಿದ್ದರು.
ರೋಹಿತ್ ರಾಜ್ ತನ್ನ ವಂಚನೆಯನ್ನು ಮುಂದುವರೆಸಿದ್ದಾನೆ. ಇದರಿಂದ ಶ್ರೇಷ್ಠಾ ಠಾಕೂರ್ ಘಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.