Advertisements

ಫೆ.23ರಿಂದ ರಾಜ್ಯ ಕಾಂಗ್ರೆಸ್ ನಾಯಕರಿಂದ ರಾಜ್ಯಾದ್ಯಂತ ಪ್ರವಾಸ

ಬೆಂಗಳೂರು: ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವ ರಾಜ್ಯ ಕಾಂಗ್ರೆಸ್ ನಾಯಕರು ಫೆ.23ರಿಂದ ಅಥವಾ ನಂತರ ರಾಜ್ಯಾ ದ್ಯಂತ ಪ್ರವಾಸ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ವಿಧಾನಸಭೆ ಚುನಾವಣೆ ಮಾದರಿಯಲ್ಲೇ ಲೋಕಸಭಾ ಚುನಾವಣೆ ಪ್ರಚಾರಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾ‌ರ್ ಪ್ರತ್ಯೇಕವಾಗಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಸಿದ್ದರಾಮಯ್ಯ 16, ಶಿವಕುಮಾರ್ 15 ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಚುನಾ ವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.

ಇವರಿಗೆ ಸಂಪುಟದ ಸಚಿವರುಗಳೂ ಸೇರಿ ಪಕ್ಷದ ಪ್ರಮುಖರು ಸಾಥ್ ನೀಡಲಿದ್ದಾರೆ.

ಲೋಕಸಭಾ ಚುನಾವಣೆಯಲ್ಲೂ ಪಕ್ಷ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲು ವಿಧಾನಸಭೆ ಚುನಾವಣೆ ವೇಳೆ ಹೆಣೆದ ತಂತ್ರವನ್ನೇ ಪ್ರಯೋಗಿಸುತ್ತಿದ್ದು, ಮೊದಲು ಇಬ್ಬರೂ ನಾಯಕರು ಪ್ರತ್ಯೇಕ ಪ್ರವಾಸ ನಡೆಸಿ ನಂತರ ಸಾಧ್ಯವಾದಷ್ಟೂ ಜಿಲ್ಲೆಗಳಲ್ಲಿ ಒಟ್ಟಾಗಿ ಪ್ರವಾಸ ಕೈಗೊಳ್ಳಲಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿಗೊಳಿಸಿರುವ ಗ್ಯಾರಂಟೆಗಳ ಯಶಸ್ವಿ ಜಾರಿಹಾಗೂ ಕೇಂದ್ರದಿಂದ ತೆರಿಗೆ ಅನ್ಯಾಯ ಆಗುತ್ತಿದೆ ಎಂಬ ವಿಚಾರಗಳನ್ನು ಪ್ರವಾಸದ ವೇಳೆ ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಎಐಸಿಸಿ ಅಧ್ಯಕ್ಷ ಖರ್ಗೆ ರಾಜ್ಯದವರೇ ಆಗಿರುವುದರಿಂದ ಕರ್ನಾ ಟಕದ 28 ಲೋಕ ಸಭಾ ಕ್ಷೇತ್ರಗಳಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿ ರಾಜ್ಯ ನಾಯಕರದ್ದಾಗಿದೆ.

Leave a Comment

Advertisements

Recent Post

Live Cricket Update