Advertisements

ಅಪ್ರಾಪ್ತೆ ಗ್ಯಾಂಗ್‌ ರೇಪ್‌: ಆರೋಪಿಗಳ ಮನೆ ನೆಲಸಮ

ಧ್ಯಪ್ರದೇಶ : ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳ ಮನೆಗಳನ್ನು ನೆಲಸಮ ಮಾಡುವ ಮೂಲಕ ಮಧ್ಯ ಪ್ರದೇಶದ ಸರ್ಕಾರ ಕಿರಾತಕರಿಗೆ ಬಿಸಿ ಮುಟ್ಟಿಸಿದೆ.

ಮೂರ್ನಾಲ್ಕು ದಿನಗಳ ಹಿಂದೆ ಮಧ್ಯಪ್ರದೇಶದ ಮಂದಸೌರ್‌ನಲ್ಲಿ ಅಪ್ರಾಪ್ತೆಗೆ ಬ್ಲ್ಯಾಕ್‌ಮೇಲ್‌ ಮಾಡಿ ಆಕೆಯ ಮೇಲೆ ಐದು ಜನ ಗ್ಯಾಂಗ್‌ ರೇಪ್‌ ಮಾಡಿದ್ದಾರೆ.

ಈ ಪ್ರಕರಣ ಅಲ್ಲಿನ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ಖಂಡಿಸಿ, ಹಾಗೂ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪ್ರತಿಭಟನೆಗಳು ನಡೆದಿವೆ.

ಇನ್ನು ಬಂಧಿತರ ಪೈಕಿ ನಾಲ್ವರ ಮನೆಗಳನ್ನು ಜಿಲ್ಲಾಡಳಿತದಿಂದ ಧ್ವಂಸ ಮಾಡಲಾಗಿದೆ. ಈ ಮನೆಗಳು ಅಕ್ರಮವಾಗಿ ನಿರ್ಮಿಸಲಾಗಿತ್ತು. ಹೀಗಾಗಿ ಅವುಗಳನ್ನು ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆ ವೇಳೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.

Leave a Comment

Advertisements

Recent Post

Live Cricket Update