ಇಸ್ಲಮಾಬಾದ್: ಪಾಕಿಸ್ತಾನದ ಉಸ್ತುವಾರಿ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ.
ಪೆಟ್ರೋಲ್ ಬೆಲೆಯಲ್ಲಿ ಪ್ರತೀ ಲೀಟರ್ ಗೆ 2.73 ರೂ. ಏರಿಕೆಯಾಗಿದ್ದು ಲೀಟರ್ ಪೆಟ್ರೋಲ್ ದರ 275.62 ಪಾಕ್ ರೂ.ಗೆ ತಲುಪಿದೆ.
(ಪಾಕಿಸ್ತಾನದ 3.36 ರೂ. ಭಾರತದ 1 ರೂಗೆ ಸಮ). ಇದೇ ವೇಳೆ ಹೈಸ್ಪೀಡ್ ಡೀಸೆಲ್ ಬೆಲೆ ಲೀಟರ್ ಗೆ 8.37 ರೂ. ಹೆಚ್ಚಿದ್ದು ಪ್ರತೀ ಲೀಟರ್ ಗೆ 287.33 ಪಾಕ್ ರೂ.ಗೆ ತಲುಪಿದೆ. ತೈಲ ಮತ್ತು ಅನಿಲ ನಿಯಂತ್ರಣ ಪ್ರಾಧಿಕಾರ(ಓಜಿಆರ್‍ಎ)ದ ಶಿಫಾರಸಿನಂತೆ ಬೆಲೆ ಹೆಚ್ಚಳ ಮಾಡಿದ್ದು ಫೆಬ್ರವರಿ 29ರವರೆಗೆ ಈ ಪರಿಷ್ಕøತ ದರ ಚಾಲ್ತಿಯಲ್ಲಿರುತ್ತದೆ ಎಂದು ಉನ್ನತ ಮೂಲಗಳು ಹೇಳಿವೆ.