Advertisements

ಮೀಟರ್ ಬಡ್ಡಿ ದಂಧೆ: ಮೂವರ ಬಂಧನ

ಬೆಂಗಳೂರು: ನಗರದಲ್ಲಿ ಮೀಟರ್ ಬಡ್ಡಿ ದಂಧೆ ಪ್ರಕರಣ ಬೆಳಕಿಗೆ ಬಂದಿದ್ದು, ಮೂವರು ಸೈಕಲ್ ರವಿ ಸಹಚರರನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.
ದಂಧೆಯಲ್ಲಿ ಸಾಲ ವಸೂಲಿಗೆ ಮುಂದಾಗಿದ್ದ ಉಮೇಶ್, ಸುರೇಶ್, ಮಂಜುನಾಥ್​ ಬಂಧಿತ ಆರೋಪಿಗಳಾಗಿದ್ದು, ಆರ್​ಆರ್​ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರಾವೆಲ್ಸ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಗೆ ಆರೋಪಿ ಮಂಜುನಾಥ್ ಸಾಲ ನೀಡಿದ್ದ. ಈ ಸಾಲದ ವಸೂಲಿ ಮಾಡಿಕೊಡಲು ಸೈಕಲ್ ರವಿ ಸಹಚರನಾದ ಉಮೇಶ್​ಗೆ ಮಂಜುನಾಥ್ ಹೇಳಿದ್ದ. ಉಮೇಶ್ ತನ್ನ ಸಹಚರನಾದ ಸುರೇಶ್ ಜೊತೆ ಮೀಟರ್ ಬಡ್ಡಿ ವಸೂಲಿಗೆ ಮುಂದಾಗಿದ್ದ. ಈ ವಿಚಾರ ತಿಳಿದ ಸಿಸಿಬಿ ಪೊಲೀಸರು ಉಮೇಶ್, ಸುರೇಶ್ ಹಾಗೂ ಮಂಜುನಾಥ್​​ ಅವರನ್ನು ಬಂಧಿಸಿದ್ದಾರೆ.

ಟ್ರಾವೆಲ್ಸ್ ವ್ಯವಹಾರಕ್ಕಾಗಿ ರಂಗನಾಥ್ ಎಂಬವರು ಮಂಜುನಾಥ್ ಬಳಿ 23 ಲಕ್ಷ ಹಣವನ್ನ ಬಡ್ಡಿಗೆ ಸಾಲ ಪಡೆದಿದ್ದರು. 23 ಲಕ್ಷ ಹಣವನ್ನ ಬಡ್ಡಿ ಸಮೇತ ರಂಗನಾಥ್ ಹಿಂದಿರುಗಿಸಿದ್ದರು. ಆದರೆ ಮಂಜುನಾಥ್ ನಾನು ಮೀಟರ್ ಬಡ್ಡಿಗೆ ಹಣವನ್ನ ಕೊಟ್ಟಿರುವುದು. ಇನ್ನೂ 5 ಲಕ್ಷ ಹಣವನ್ನ ನೀನು ಕೊಡಬೇಕು ಎಂದು ಪಟ್ಟು ಹಿಡಿದಿದ್ದ.

ಹೊಸಕೆರೆಹಳ್ಳಿ ಉಮೇಶ್​ ರಂಗನಾಥನಿಗೆ ಅವಾಜ್ ಹಾಕಿರುವ ಆಡಿಯೋ ವೈರಲ್ ಆಗಿದೆ. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ ಆರೋಪಿಗಳ ವಿರುದ್ಧ ಆರ್​ಆರ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Comment

Advertisements

Recent Post

Live Cricket Update