ರಾಜ್‌ಕೋಟ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದತ್ತಾಜಿರಾವ್ ಗಾಯಕವಾಡ ಅವರ ಸಾವಿಗೆ ಸಂತಾಪ ಸೂಚಿಸಿ ಟೀಮ್ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಗೌರವ ಸಲ್ಲಿಸಿದ್ದಾರೆ.
ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಆಟ ಆರಂಭಿಸುವ ಮೊದಲು ಟೀಂ ಇಂಡಿಯಾ ಆಟಗಾರರು ಮೌನಾಚರಣೆ ಸಲ್ಲಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾಗಿದ್ದ ದತ್ತಾಜಿರಾವ್ ಗಾಯಕವಾಡ (95) ಅವರು ಬರೋಡಾದಲ್ಲಿ ನಿಧನರಾದರು. ದಿವಂಗತ ವಿಜಯ ಹಜಾರೆ ಅವರ ಸಮಕಾಲೀನರಾಗಿದ್ದ ದತ್ತಾಜಿರಾವ್ ಭಾರತ ತಂಡವನ್ನು 11 ಟೆಸ್ಟ್ಗಳಲ್ಲಿ ಪ್ರತಿನಿಧಿಸಿದ್ದರು. ಹಜಾರೆಯವರಷ್ಟೇ ಕೌಶಲಪೂರ್ಣ ಬ್ಯಾಟರ್ ಕೂಡ ಆಗಿದ್ದರು. ಮೂಲತಃ ಬರೋಡಾದವರೇ ಆದ ದತ್ತಾಜಿರಾವ್ 1950ರಲ್ಲಿ ತಮ್ಮ ಕವರ್ ಡ್ರೈವ್ಗಳಿಂದ ಮುಂಬೈನಂತಹ ಬಲಿಷ್ಠ ತಂಡಗಳಿಗೆ ಸಿಂಹಸ್ವಪ್ನರಾಗಿದ್ದರು.