Advertisements

40ನೇ ವಸಂತಕ್ಕೆ ಕಾಲಿಟ್ಟ ಎಬಿ ಡಿವಿಲಿಯರ್ಸ್‌

ಜೋಹಾನ್ಸ್’ಬರ್ಗ್: ವಿಶ್ವ ಕ್ರಿಕೆಟ್‌ನ ʻಮಿಸ್ಟರ್‌ ೩೬೦ʼ ಎಂದೇ ಪ್ರಖ್ಯಾತಿ ಪಡೆದಿರುವ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ ತಮ್ಮ 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕೋಟ್ಯಾಂತರ ಕ್ರಿಕೆಟ್‌ ಪ್ರೇಮಿಗಳ ಮನಗೆದ್ದಿರುವ ಎಬಿಡಿ(ABD), ವಿಶ್ವ ಕ್ರಿಕೆಟ್‌ನ ʻಮೋಸ್ಟ್‌ ಟ್ಯಾಲೆಂಟೆಡ್‌ ಕ್ರಿಕೆಟರ್‌ʼ ಎನಿಸಿಕೊಂಡಿದ್ದಾರೆ.

ಡಿವಿಲಿಯರ್ಸ್‌, ಸೌತ್‌ ಆಫ್ರಿಕಾ ತಂಡದ ಪ್ರಮುಖ ಬ್ಯಾಟಿಂಗ್‌ ಅಸ್ತ್ರವಾಗಿದ್ದರು.

ಎಬಿ ಡಿವಿಲಿಯರ್ಸ್‌, 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿಕೊಟ್ಟರು. ಡಿವಿಲಿಯರ್ಸ್‌, ಟೆಸ್ಟ್‌, ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಯಶಸ್ಸಿನ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿಯೇ ಎಬಿ ಡಿವಿಲಿಯರ್ಸ್‌ ಅವರು, 2018ರಲ್ಲಿ ಭಾರತದ ವಿರುದ್ದ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡುವ ಮೂಲಕ ಒಂದೂವರೆ ದಶಕಗಳ ಕಾಲ ಅಂತಾರಾಷ್ಟ್ರಿಯ ಕ್ರಿಕೆಟ್‌ಗೆ ವಿದಾಯ ಹೇಳಿದರು.

ಡಿವಿಲಿಯರ್ಸ್‌, ಐಪಿಎಲ್‌ ಟೂರ್ನಿಯ ಮೂಲಕ ಭಾರತೀಯ ಕ್ರಿಕೆಟ್‌ ಪ್ರೇಮಿಗಳಿಗೆ ಹತ್ತಿರವಾದರು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟರ್‌ ಆಗಿ ಹಲವು ವರ್ಷಗಳ ಕಾಲ ಆಡಿದ ಎಬಿಡಿ, ಇಂದಿಗೂ ಎಲ್ಲರ ನೆಚ್ಚಿನ ಕ್ರಿಕೆಟರ್‌ ಆಗಿದ್ದಾರೆ.

ಕ್ರಿಕೆಟ್‌ ಜಗತ್ತಿನ ಬೆಸ್ಟ್‌ ಫ್ರೆಂಡ್ಸ್‌ಗಳ ಸಾಲಿನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ ಅಗ್ರ ಸ್ಥಾನದಲ್ಲಿದ್ದಾರೆ.

ಎಬಿಡಿ ದಾಖಲೆಗಳು:
– 9,597 ODI runs.
– 8,765 Test runs.
– 5,162 IPL runs.
– 53.5 Average in ODIs.
– 50.66 Average in Tests.
– 101.1 Strike Rate in ODIs.
– Fastest to 50, 100 & 150 in ODIs.
– 1,480 days as No.1 ODI batter.

Leave a Comment

Advertisements

Recent Post

Live Cricket Update