ಮುಂಬೈ: ದಂಗಲ್ ಚಿತ್ರದ ಮೂಲಕ ರಾಷ್ಟ್ರವ್ಯಾಪಿ ಛಾಪು ಮೂಡಿಸಿದ್ದ ಸುಹಾನಿ ಭಟ್ನಾಗರ್ ಕೇವಲ 19ರ ಪ್ರಾಯದಲ್ಲಿಯೇ ಉಸಿರು ಚೆಲ್ಲಿದ್ದಾರೆ.
ಆಮೀರ್ ಖಾನ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ದಂಗಲ್ ಮೂಲಕ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದವರು ಸುಹಾನಿ ಭಟ್ನಾಗರ್. ಆಮೀರ್ ಖಾನ್ ಕಿರಿಯ ಪುತ್ರಿ ಬಬಿತಾ ಪೋಗಟ್ ಅವರ ಬಾಲ್ಯಾವಸ್ಥೆಯ ಪಾತ್ರವನ್ನ ನಿರ್ವಹಿಸಿ, ಅನೇಕರ ಹೃದಯವನ್ನ ಗೆದಿದ್ದ ಸುಹಾನಿ ಇಂದು ಕೊನೆಯು ಸಿರೆಳೆದಿದ್ದಾರೆ.
ಅಸಲಿಗೆ ದಂಗಲ್ ಚಿತ್ರದ ನಂತರ ಸುಹಾನಿ ಭಟ್ನಾಗರ್ ಗೆ ಅನೇಕ ಅವಕಾಶಗಳು ಅರಸಿ ಹೋಗಿದ್ದವು. ಆದರೆ ಸುಹಾನಿ ಯಾವುದನ್ನೂ ಒಪ್ಪಿರಲಿಲ್ಲ. ಯಾಕೆಂದರೆ ಮೊದಲು ‘ಅಭ್ಯಾಸ’ ಆ ನಂತರ ‘ಹವ್ಯಾಸ’ ಎನ್ನುವ ತೀರ್ಮಾನಕ್ಕೆ ಸುಹಾನಿ ಬಂದಿದ್ದರು. ಚಿತ್ರರಂಗದಿಂದ ಅಲ್ಪ ವಿರಾಮವನ್ನೂ ತೆಗೆದು ಕೊಂಡರು.