ನವದೆಹಲಿ: ಪ್ರಧಾನಮಂತ್ರಿಯವರು ಸಂಭಾಲ್ ನಲ್ಲಿ ಹಿಂದೂ ದೇವಾಲಯ ಕಲ್ಕಿ ಧಾಮ್ ಗೆ ಶಂಕುಸ್ಥಾಪನೆ ನೆರವೇರಿಸಿದರು.
ನಂತರ, ಲಕ್ನೋದಲ್ಲಿ ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಲಿದ್ದು, ಅಲ್ಲಿ 10 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆ ಗಳನ್ನು ಅನಾವರಣಗೊಳಿಸಲಿದ್ದಾರೆ.
ಈ ಯೋಜನೆಗಳು ರಾಜ್ಯದಲ್ಲಿ 33.5 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿವೆ ಮತ್ತು ಮುಖ್ಯವಾಗಿ ಉತ್ಪಾದನೆ, ನವೀಕರಿಸಬಹು ದಾದ ಇಂಧನ, ಮಾಹಿತಿ ತಂತ್ರಜ್ಞಾನ, ವಸತಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತವೆ.
ಪಶ್ಚಿಮದಲ್ಲಿ ಗರಿಷ್ಠ ಶೇ.52, ಪೂರ್ವಾಂಚಲದಲ್ಲಿ ಶೇ.29, ಮಧ್ಯಾಂಚಲದಲ್ಲಿ ಶೇ.14 ಮತ್ತು ಬುಂದೇಲ್ಖಂಡ್ನಲ್ಲಿ ಶೇ.5ರಷ್ಟು ಹೂಡಿಕೆಗಳು ನಡೆಯುತ್ತಿವೆ ಎಂದು ಉತ್ತರ ಪ್ರದೇಶದ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ನಂದಗೋಪಾಲ್ ಗುಪ್ತಾ ಹೇಳಿದ್ದಾರೆ.