Advertisements

ಮಾಜಿ ಫುಟ್ಬಾಲ್ ಆಟಗಾರ ತಪ್ಪಿತಸ್ಥ: ನಾಲ್ಕೂವರೆ ವರ್ಷ ಜೈಲು ಶಿಕ್ಷೆ

ಕ್ಯಾಟಲೋನಿಯಾ: 2022ರಲ್ಲಿ ಬಾರ್ಸಿಲೋನಾ ನೈಟ್ ಕ್ಲಬ್ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬ್ರೆಜಿಲ್’ನ ಮಾಜಿ ಫುಟ್ಬಾಲ್ ಆಟಗಾರ ಡ್ಯಾನಿ ಅಲ್ವೆಸ್ ತಪ್ಪಿತಸ್ಥ ಎಂದು ಕ್ಯಾಟಲೋನಿಯಾದ ಉನ್ನತ ನ್ಯಾಯಾಲಯ ಗುರುವಾರ ತೀರ್ಪು ನೀಡಿದ್ದು, ನಾಲ್ಕೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಅಲ್ವೆಸ್ ಸಂತ್ರಸ್ತೆಗೆ 150,000 ಯುರೋ (162,990 ಡಾಲರ್) ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.

“ಸಂತ್ರಸ್ತೆ ಒಪ್ಪಲಿಲ್ಲ ಎಂಬುದು ಸಾಬೀತಾಗಿದೆ ಮತ್ತು ಅತ್ಯಾಚಾರವನ್ನ ಸಾಬೀತುಪಡಿಸಲು ವಾದಿಯ ಸಾಕ್ಷ್ಯದ ಜೊತೆಗೆ ಪುರಾವೆಗಳಿವೆ ಎಂದು ಶಿಕ್ಷೆ ಪರಿಗಣಿಸುತ್ತದೆ” ಎಂದು ನ್ಯಾಯಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ತಿಂಗಳು ಮೂರು ದಿನಗಳ ಕಾಲ ನಡೆದ ವಿಚಾರಣೆಯಲ್ಲಿ 40 ವರ್ಷದ ಅಲ್ವೆಸ್ ಯಾವುದೇ ತಪ್ಪನ್ನು ಮಾಡಿಲ್ಲ ಎಂದಿದ್ದರು

Leave a Comment

Advertisements

Recent Post

Live Cricket Update