Advertisements

ತೆಲುಗಿನ ಖ್ಯಾತ ಯೂಟ್ಯೂಬರ್‌ ಷಣ್ಮುಖ್ ಜಸ್ವಂತ್‌ ಬಂಧನ

ಹೈದರಾಬಾದ್: ಮನೆಯಲ್ಲಿ ಗಾಂಜಾ ಹೊಂದಿದ್ದ ಆರೋಪದ ಮೇಲೆ ತೆಲುಗಿನ ಯೂಟ್ಯೂಬರ್‌ ಹಾಗೂ ಬಿಗ್‌ ಬಾಸ್‌ ತೆಲುಗು ಸೀಸನ್‌ -5 ಯ ರನ್ನರ್‌ ಅಪ್‌ ಷಣ್ಮುಖ್ ಜಸ್ವಂತ್‌ ರನ್ನು ಪೊಲೀಸರು ಬಂಧಿಸಿದ್ದಾರೆ.

ಷಣ್ಮುಖ್ ಜಸ್ವಂತ್ ಹಾಗೂ ಅವರ ಸಹೋದರ ಸಂಪತ್ ವಿನಯ್ ಅವರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಸಂಪತ್‌ ವಿನಯ್‌ ಅವರ ಭಾವಿ ಪತ್ನಿ ಡಾ. ಮೋನಿಕಾ ಎಂಬವರು, ಸಂಪತ್‌ ಮದುವೆಗೆ 6 ದಿನಗಳು ಇರುವಾಗ ತನಗೆ ಮೋಸ ಮಾಡಿ, ಬೇರೆ ಹುಡುಗಿ ಯನ್ನು ಮದುಚವೆ ಆಗಲು ಹೊರಟಿದ್ದಾನೆ ಎಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಮೋನಿಕಾ ಅವರ ದೂರಿನ ಆಧಾರದ ಮೇಲೆ ಸಂಪತ್‌ ಅವರ ಫ್ಲಾಟ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಪೊಲೀಸರಿಗೆ ಮನೆಯಲ್ಲಿ ಗಾಂಜಾ ಹೊಂದಿರುವುದು ಗೊತ್ತಾಗಿದೆ. ಈ ಕಾರಣದಿಂದ ಷಣ್ಮುಖ್‌ ಹಾಗೂ ಸಂಪತ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆಯೂ ಷಣ್ಮುಖ್‌ ಅವರನ್ನು ಪೊಲೀಸರು ಕುಡಿದು ವಾಹನ ಚಲಾಯಿಸಿ, ವ್ಯಕ್ತಿಯೊಬ್ಬರಿಗೆ ಢಿಕ್ಕಿ ಹೊಡೆದ ಪ್ರಕರಣದಲ್ಲಿ ಬಂಧಿಸಿದ್ದರು.

ಹೈದರಾಬಾದ್‌ ನಲ್ಲಿ ಷಣ್ಮುಖ್‌ ಅವರು ಯೂಟ್ಯೂಬರ್‌ ಆಗಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.

Leave a Comment

Advertisements

Recent Post

Live Cricket Update