ನವದೆಹಲಿ: ಭಾರತದ ವೇಗಿ ಮೊಹಮ್ಮದ್ ಶಮಿ ಅವರು ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುವುದಿಲ್ಲ.
ಭಾರತದ ವೇಗದ ಬೌಲರ್ ಶಮಿ ಎಡ ಪಾದದ ಗಾಯದಿಂದಾಗಿ ಬ್ರಿಟನ್ ನಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದರಿಂದ ಐಪಿಎಲ್ 2024 ರಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಶಮಿ ಅವರು ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡುತ್ತಾರೆ. ಹೊಸ ನಾಯಕ ಶುಭ್ಮನ್ ಗಿಲ್ ಅವರಿಗೆ ಇದೀಗ ಶಮಿ ಅಲಭ್ಯತೆ ದೊಡ್ಡ ಹಿನ್ನಡೆಯಾಗಿದೆ.
2022ರ ಸೀಸನ್ ನಲ್ಲಿ 20 ವಿಕೆಟ್ ಕಿತ್ತಿದ್ದ ಶಮಿ, 2023ರ ಆವೃತ್ತಿಯಲ್ಲಿ 18.64ರ ಸರಾಸರಿಯಲ್ಲಿ 28 ವಿಕೆಟ್ ಕಿತ್ತು ಮಿಂಚಿದ್ದರು. ಈ ಎರಡೂ ಆವೃತ್ತಿ ಗಳಲ್ಲಿ ಗುಜರಾತ್ ಫೈನಲ್ ಪ್ರವೇಶ ಪಡೆದು ಮೊದಲ ಬಾರಿ ಗೆಲುವು ಕಂಡಿತ್ತು.
ಶಮಿ ಅಲಭ್ಯತೆಯ ಕಾರಣದಿಂದ ಗುಜರಾತ್ ಫ್ರಾಂಚೈಸಿಯು ಬದಲಿ ಆಟಗಾರನ ಹುಡುಕಾಟದಲ್ಲಿದೆ.