ನವದೆಹಲಿ: ಖ್ಯಾತ ಗಾಯಕ ಪಂಕಜ್ ಉಧಾಸ್ (72) ನಿಧನರಾಗಿದ್ದಾರೆ.
“ದೀರ್ಘಕಾಲದ ಅನಾರೋಗ್ಯದಿಂದಾಗಿ ಫೆಬ್ರವರಿ 26ರಂದು ಪದ್ಮಶ್ರೀ ಪಂಕಜ್ ಉಧರ್ ಅವರ ದುಃಖದ ನಿಧನದ ಬಗ್ಗೆ ತಿಳಿಸಲು ತುಂಬಾ ಭಾರವಾದ ಹೃದಯದಿಂದ ನಾವು ದುಃಖಿತರಾಗಿದ್ದೇವೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಅನೇಕರಿಗೆ ಆಘಾತವನ್ನುಂಟು ಮಾಡಿದ್ದು, ಗಾಯಕ ಸೋನು ನಿಗಮ್ ಸಂತಾಪ ವ್ಯಕ್ತ ಪಡೆಸಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗಾಯಕ ಸೋನು ನಿಗಮ್, “ನನ್ನ ಬಾಲ್ಯದ ಪ್ರಮುಖ ಭಾಗವೊಂದು ಇಂದು ಕಳೆದುಹೋಗಿದೆ. ಶ್ರೀಪಂಕಜ್ ಉಧಾಸ್ ಜೀ, ನಾನು ನಿಮ್ಮನ್ನು ಎಂದೆಂದಿಗೂ ಮಿಸ್ ಮಾಡಿಕೊಳ್ಳುತ್ತೇನೆ. ನೀವು ಇನ್ನಿಲ್ಲ ಎಂದು ತಿಳಿದು ನೊಂದಿದ್ದೇನೆ. ಓಂ ಶಾಂತಿ” ಎಂದಿದ್ದಾರೆ.