ನವದೆಹಲಿ: ಎಎಪಿ ಇಂಡಿಯಾ ಒಕ್ಕೂಟದ ಭಾಗವಾಗಿದ್ದು, ಲೋಕಸಭೆ ಚುನಾವಣೆಗೆ ನಾಲ್ವರು ಅಭ್ಯರ್ಥಿಗಳ ಹೆಸರನ್ನ ಘೋಷಿಸಿದೆ. ದೆಹಲಿಯಿಂದ ನಾಲ್ವರು ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.
ನವದೆಹಲಿ – ಸೋಮನಾಥ್ ಭಾರ್ತಿ
ದಕ್ಷಿಣ ದೆಹಲಿ – ಸಾಹಿ ರಾಮ್ ಪೆಹಲ್ವಾನ್
ಪೂರ್ವ ದೆಹಲಿ – ಕುಲದೀಪ್ ಕುಮಾರ್
ಪಶ್ಚಿಮ ದೆಹಲಿ – ಮಹಾಬಲ ಮಿಶ್ರಾ
ಮುಂಬರುವ ಲೋಕಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಮಂಗಳವಾರ ಐದು ಅಭ್ಯರ್ಥಿಗಳನ್ನು ಘೋಷಿಸಿದೆ. ಅದರಲ್ಲಿ ನಾಲ್ವರು ದೆಹಲಿಯಿಂದ ಮತ್ತು ಒಬ್ಬರು ಹರಿಯಾಣದಿಂದ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಪೂರ್ವ ದೆಹಲಿಯಿಂದ ಕುಲದೀಪ್ ಕುಮಾರ್, ಪಶ್ಚಿಮ ದೆಹಲಿಯಿಂದ ಮಹಾಬಲ್ ಮಿಶ್ರಾ, ದಕ್ಷಿಣ ದೆಹಲಿ ಯಿಂದ ಸಾಹಿರಾಮ್ ಪೆಹಲ್ವಾನ್ ಮತ್ತು ನವದೆಹಲಿಯಿಂದ ಸೋಮನಾಥ್ ಭಾರ್ತಿ ಅವರನ್ನು ಕಣಕ್ಕಿಳಿಸಿದೆ. ಕುರುಕ್ಷೇತ್ರದಿಂದ ಸುಶೀಲ್ ಗುಪ್ತಾ ಅವರನ್ನು ಕಣಕ್ಕಿಳಿಸಲಾಗಿದೆ.
ದೆಹಲಿ, ಹರಿಯಾಣ, ಗೋವಾ ಮತ್ತು ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ ಕೆಲವು ದಿನಗಳ ನಂತರ ಎಎಪಿ ಈ ಘೋಷಣೆ ಮಾಡಿದೆ. ಜಂಟಿ ಹೇಳಿಕೆಯಲ್ಲಿ, ಎರಡೂ ಪಕ್ಷಗಳು ಪಂಜಾಬಿನಲ್ಲಿ ಒಟ್ಟಿಗೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಪರಸ್ಪರ ನಿರ್ಧರಿಸಿವೆ ಎಂದು ತಿಳಿಸಿವೆ