ಜಾಮ್ನಗರ: ಮುಕೇಶ್ ಅಂಬಾನಿ ಕಿರಿಯ ಮಗ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ಗೆ ಮೂರು ಗಂಟು ಹಾಕಲು ಸಜ್ಜಾಗಿದ್ದಾರೆ. ಈ ಜೋಡಿಯು ಜುಲೈ 12ರಂದು ಮುಂಬೈನಲ್ಲಿ ಅದ್ದೂರಿಯಾಗಿ ಸಪ್ತಪದಿ ತುಳಿಯಲಿದೆ.
ಮಾರ್ಚ್ 1 ರಿಂದ ಮಾರ್ಚ್ 3, 2024 ರವರೆಗೆ ಅದ್ದೂರಿ ವಿವಾಹ ಪೂರ್ವ ಸಂಭ್ರಮ ನೆರವೇರಲಿದೆ. ವರದಿಗಳ ಪ್ರಕಾರ, ಅರಿಜಿತ್ ಸಿಂಗ್, ರಿಹಾನ್ನಾ ರಂತಹ ಗಾಯಕರು ಸೇರಿದಂತೆ ಅನೇಕರು ಮದುವೆಯ ಸಂಭ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ಬಿ ಪ್ರಾಕ್ ಪರ್ಫಾರ್ಮೆನ್ಸ್ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಬಿ ಪ್ರಾಕ್ ಅವರನ್ನು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭಗಳಲ್ಲಿ ಪ್ರದರ್ಶನ ನೀಡಲು ಅಂಬಾನಿ ಕುಟುಂಬ ಆಹ್ವಾನಿಸಿದೆ. ಬಿ ಪ್ರಾಕ್ ಅವರ ಇತ್ತೀಚಿನ ಹಾಡುಗಳು ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸದ್ದು ಮಾಡುತ್ತಿವೆ ಮತ್ತು ಪ್ರತಿಯೊಂದು ಹಾಡೂ ಸಹ ಸಖತ್ ವೈರಲ್ ಆಗಿವೆ. ಅವರ ಇತ್ತೀಚಿನ ಹಾಡುಗಳಲ್ಲಿ ಸಾರಿ ದುನಿಯಾ ಜಲ ದೆಂಗೆ, ಅಚ್ಚ ಸಿಲಾ ದಿಯಾ, ದುನಿಯಾ ಮತ್ತು ಹೆಚ್ಚಿನವು ಸೇರಿವೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭಗಳಲ್ಲಿ ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಮತ್ತು ಹಾಲಿವುಡ್ ಬಿಗ್ಗಿ ರಿಹಾನ್ನಾ ಕಾರ್ಯಕ್ರಮ ನೀಡಲಿದ್ದಾರೆ.
ಶಾರುಖ್ ಖಾನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೂಡ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ.