Advertisements

ನೃತ್ಯ ಕಲಾವಿದ ಅಮರನಾಥ್​ ಘೋಷ್ ಗುಂಡಿಕ್ಕಿ ಹತ್ಯೆ

ಮೆರಿಕ: ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಕಲಾವಿದ ಅಮರನಾಥ್​ ಘೋಷ್ ಅವರನ್ನು ಅಮೆರಿಕದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕಿರುತೆರೆ ನಟಿ ದೇವೋಲೀನಾ ಭಟ್ಟಾಚಾರ್ಜಿ ಜಾಲತಾಣದಲ್ಲಿ ಈ ಮಾಹಿತಿ ನೀಡಿದ್ದಾರೆ.

ಅಮರನಾಥ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ವಿದೇ ಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವೋಲೀನಾ ಮನವಿ ಮಾಡಿದ್ದಾರೆ.

ದೇವೋಲೀನಾ ಭಟ್ಟಾಚಾರ್ಜಿ ಅವರು ಅಮರನಾಥ್ ಅವರ ಸಾವಿಗೆ ಸಂಬಂಧಿಸಿದ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಅಮರನಾಥ್​ರ ತಂದೆ ಅಮರ್​ನಾಥ್​ ಅವರು ಚಿಕ್ಕವರಿರುವಾಗಲೇ ತೀರಿಕೊಂಡಿದ್ದರು. ಮೂರು ವರ್ಷಗಳ ಹಿಂದೆ ಅಮರನಾಥ್​ರ ತಾಯಿಯೂ ಇರಲಿಲ್ಲ. ಅಮರನಾಥ್ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಅಮರನಾಥ್​ ಕೋಲ್ಕತ್ತಾದವರು ಎಂದು ದೇವೋಲೀನಾ ಬರೆದಿದ್ದಾರೆ. ಪಿಎಚ್‌ಡಿ ಮಾಡು ತ್ತಿದ್ದ ಅತ್ಯುತ್ತಮ ನೃತ್ಯ ಕಲಾವಿದ, ಸಂಜೆ ವಾಕಿಂಗ್ ಹೋಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Comment

Advertisements

Recent Post

Live Cricket Update