Advertisements

ನಥಿಂಗ್‌ನಿಂದ ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

ನವದೆಹಲಿ: ನಥಿಂಗ್‌ ಇಂದು ತನ್ನ ಅತ್ಯಂತ ನಿರೀಕ್ಷಿತ ಹೊಸ ಸ್ಮಾರ್ಟ್‌ಫೋನ್‌ ಫೋನ್(2ಎ) ಅನ್ನು ಬಿಡುಗಡೆ ಮಾಡಿದೆ. ಫೋನ್ (2ಎ) ಉತ್ತಮವಾದ ದೈನಂದಿನ ಸ್ಮಾರ್ಟ್‌ಫೋನ್ ಅನುಭವವನ್ನು ಒದಗಿಸುತ್ತದೆ.

ನಥಿಂಗ್ ತನ್ನ ಪರಿಣಿತಿ, ಇಂಜಿನಿಯರಿಂಗ್ ಮತ್ತು ಕರಕುಶಲತೆಯಿಂದ ಬಳಕೆದಾರರ ಮುಖ್ಯ ಅಗತ್ಯಗಳನ್ನು ಇದು ಅತ್ಯುತ್ತಮವಾಗಿ ಪೂರೈಸುತ್ತದೆ. ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ತಮಗೆ ಯಾವ ಕೆಲಸ ಆಗಬೇಕು ಎಂದು ತಿಳಿದಿರುವುದರ ಜೊತೆಗೆ ಹೊಸ ಅನ್ವೇಷಣೆಗಳು ಮತ್ತು ವಿನ್ಯಾಸಗಳನ್ನು ಅನಾವರಣಗೊಳಿಸಲು ಬಯಸುವ ಜನರಿಗೆಂದೇ ರೂಪಿಸಲಾದ ಸಾಧನ ಇದಾಗಿದೆ. ಅತ್ಯಂತ ಶಕ್ತಿಯುತ ವಿಶಿಷ್ಟ ಪ್ರೋಸೆಸರ್, ಅದ್ಭುತ 50 ಎಂಪಿ ಡ್ಯೂಯೆಲ್ ರಿಯರ್ ಕ್ಯಾಮೆರಾ, ಎಕ್ಸ್‌ಟ್ರಾ ಬ್ರೈಟ್ ಆಗಿರುವ ಫ್ಲೆಕ್ಸಿಬಲ್ ಅಮೊಲೆಡ್ ಡಿಸ್‌ಪ್ಲೇ ಮತ್ತು ಆಕರ್ಷಕ ಒಎಸ್ ಅನ್ನು ಇದು ಹೊಂದಿದ್ದು, ಪ್ರತಿ ಸಂವಹನದಲ್ಲಿ ವೇಗವಾದ ಮತ್ತು ಸರಾಗವಾದ ಅನುಭವವನ್ನು ಒದಗಿಸುತ್ತದೆ.

“ಈ ವರ್ಷ ನಾವು ವೇಗವಾಗಿ ಪ್ರಗತಿ ಸಾಧಿಸುತ್ತಿದ್ದೇವೆ. ಫೋನ್ (2ಎ) ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಫೋನ್ (2ಎ) ಇನ್ನಷ್ಟು ಜನರಿಗೆ ನಥಿಂಗ್ ಅನ್ವೇಷಣೆಗಳ ಅನುಭವವನ್ನು ಪಡೆಯಲು ಅನುವು ಮಾಡಿಕೊಡಲಿದೆ. ಇದು ನಮ್ಮ ಅತ್ಯುತ್ತಮ ಪ್ರಾಡಕ್ಟ್ ಆಗಲಿದೆ ಎಂಬ ವಿಶ್ವಾಸ ವನ್ನು ನಾವು ಹೊಂದಿದ್ದೇವೆ” ಎಂದು ನಥಿಂಗ್ ಸಿಇಒ ಮತ್ತು ಸಹ ಸಂಸ್ಥಾಪಕ ಕಾರ್ಲ್ ಪೆಯಿ ಹೇಳಿದ್ದಾರೆ.

ಮೀಡಿಯಾಟೆಕ್‌ ಜೊತೆಗೆ ಇಂಜಿನಿಯರಿಂಗ್ ಮಾಡಿರುವ ಡಿಮೆನ್ಸಿಟಿ 7200 ಪ್ರೋ ಪ್ರೊಸೆಸರ್ ಅನ್ನು ಹೊಂದಿರುವ ಫೋನ್ (2ಎ), ಅಭೂತ ಪೂರ್ವ ಪವರ್ ದಕ್ಷತೆ ಮತ್ತು ಅಮೋಘ ವೇಗವನ್ನು ಹೊಂದಿದೆ. ಇದಕ್ಕೆ 20 GB (12GB + 8GB) ರ್‍ಯಾಮ್ ಇದ್ದು, ರ್‍ಯಾಮ್ ಬೂಸ್ಟರ್ ಟೆಕ್ನಾಲಜಿ ಕೂಡಾ ಇದೆ. ಸ್ಮಾರ್ಟ್‌ ಕ್ಲೀನ್ ಮತ್ತು ಅಡಾಪ್ಟಿವ್ ಎನ್‌ಟಿಎಫ್‌ಎಸ್‌ನಂತಹ ಆಪ್ಟಿಮೈಸೇಶನ್‌ಗಳನ್ನು ಹೊಂದಿರುವ ನಥಿಂಗ್ ಮತ್ತು ಮೀಡಿಯಾಟೆಕ್‌ 10% ವರೆಗೆ ಪವರ್ ಬಳಕೆಯನ್ನು ಕಡಿಮೆ ಮಾಡಿವೆ. ಸಾಧನದಲ್ಲಿ ಭಾರಿಯಾದ 5,000 ಎಂಎಎಚ್ ಬ್ಯಾಟರಿ ಇದ್ದು, ಬ್ಯಾಟರಿ ಬಾಳಕೆ ಸುಧಾರಣೆಯಾಗಿದೆ ಮತ್ತು ತ್ವರಿತವಾಗಿ ಚಾರ್ಜ್ ಆಗುವುದಕ್ಕೆಂದು 45ವ್ಯಾ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಿದೆ.

ಸರಾಗವಾದ ಡ್ಯೂಯೆಲ್ 50 ಎಂಪಿ ರಿಯರ್ ಕ್ಯಾಮೆರಾವನ್ನು ಹೊಂದಿರುವ ಇದರಲ್ಲಿ ಟ್ರ್ಯೂಲೆನ್ಸ್ ಇಂಜಿನ್ ಇದೆ ಮತ್ತು ಮುಂಭಾಗದಲ್ಲಿ 32 ಎಂಪಿ ಕ್ಯಾಮೆರಾ ಇದೆ. ಫೋನ್ (2ಎ) ಜೀವನ ಕ್ಷಣಗಳನ್ನು ಅತ್ಯಂತ ನಿಖರವಾಗಿ ಸೆರೆಹಿಡಿಯುತ್ತದೆ. ಇದರ 6.7″ ಫ್ಲೆಕ್ಸಿಬಲ್ ಅಮೊಲೆಡ್ ಡಿಸ್‌ಪ್ಲೇ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುತ್ತದೆ. ಇದರಲ್ಲಿ 1300 ನಿಟ್ಸ್‌ ಬ್ರೈಟ್‌ನೆಸ್ ಇದೆ ಮತ್ತು 120 ಹರ್ಟ್ಸ್ ರಿಫ್ರೆಶ್ ರೇಟ್ ಕೂಡಾ ಇದೆ. ಫೋನ್ (2ಎ) ಯಲ್ಲಿ ನಥಿಂಗ್‌ನ ವಿಶಿಷ್ಟ ವಿನ್ಯಾಸವಿದೆ. ಉದ್ಯಮದಲ್ಲೇ ಪ್ರಥಮ 90 ಡಿಗ್ರಿ ಕೋನದ ಯೂನಿಬಾಡಿ ಕವರ್ ಇದಕ್ಕಿದೆ ಮತ್ತು ನವೀನವಾಗಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಆಂಡ್ರಾಯ್ಡ್‌ 14 ರಲ್ಲಿ ನಥಿಂಗ್ ಒಎಸ್‌ 2.5 ಇದ್ದು, ಸುಧಾರಿತ ವಿಜೆಟ್‌ಗಳು ಮತ್ತು ಎಐ ಇರುವ ವೈಶಿಷ್ಟ್ಯಗಳೊಂದಿಗೆ ಸರಾಗ ಬಳಕೆದಾರರ ಅನುಭವವನ್ನು ಫೋನ್ (2ಎ) ಒದಗಿಸುತ್ತದೆ.

ಫ್ಲಿಪ್‌ಕಾರ್ಟ್‌, ಕ್ರೋಮಾ, ವಿಜಯ್ ಸೇಲ್ಸ್ ಮತ್ತು ಇತರ ಪ್ರಮುಖ ಔಟ್‌ಲೆಟ್‌ಗಳಲ್ಲಿ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಫೋನ್ (2ಎ) ಲಬ್ಯ ವಿರಲಿದ್ದು, 2024 ಮಾರ್ಚ್‌ 12 ಮಂಗಳವಾರದಿಂದ ಮಾರಾಟ ಆರಂಭವಾಗಲಿದೆ. ಇದು ಮೂರು ಮಾಡೆಲ್‌ಗಳನ್ನು ಒದಗಿಸುತ್ತದೆ: 8GB/128GB (ರೂ. 23,999/-), 8GB/256GB (ರೂ. 25,999/-) ಮತ್ತು 12GB/256GB (ರೂ. 27,999/-). ವಿಶೇಷ ಆರಂಭಿಕ ಆಫರ್ ರೂಪದಲ್ಲಿ ಎಚ್‌ಡಿಎಫ್‌ಸಿ ಕಾರ್ಡ್‌ಗಳನ್ನು ಬಳಸುವ ಗ್ರಾಹಕರು ಎಕ್ಸ್‌ಕ್ಲೂಸಿವ್ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ರೂ. 2,000/- ರಿಯಾಯಿತಿ ಲಭ್ಯವಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಹೆಚ್ಚುವರಿ 2000 ರೂ. ಬಂಪ್ ಅಪ್ ಇದೆ. 8/128 GB ವೇರಿಯಂಟ್‌ 19,999/- ದರದಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, ಫೋನ್ (2ಎ) ಖರೀದಿ ಮಾಡುವವರು ಸಿಎಂಎಫ್‌ ಬಡ್ಸ್ (ಪ್ರೋ) ಅನ್ನು ರೂ. 1999 ದರದಲ್ಲಿ ಖರೀದಿ ಮಾಡಬಹುದು ಮತ್ತು ಸಿಎಂಎಫ್‌ ಜಿಎಎನ್ ಚಾರ್ಜರ್ ಅನ್ನು ರೂ. 1999 ದರದಲ್ಲಿ ಬಂಡಲ್ ಆಫರ್ ಆಗಿ ಖರೀದಿಸಬಹುದು. ಮಧ್ಯಾಹ್ನ 1 ಗಂಟೆಯೊಳಗೆ ಮಾಡಿದ ಆರ್ಡರ್‌ ಅನ್ನು 21 ಆಯ್ದ ನಗರಗಳಲ್ಲಿ ಅದೇ ದಿನ ಡೆಲಿವರಿ ಮಾಡಲಾಗುತ್ತದೆ.

ಸಿಎಂಎಫ್‌ ಬೈ ನಥಿಂಗ್‌ ಎಂಬ ಉಪ ಬ್ರಾಂಡ್ ಅಡಿಯಲ್ಲಿ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಅನ್ನೂ ಕೂಡಾ ನಥಿಂಗ್ ಘೋಷಿಸಿದೆ. ನೆಕ್‌ಬ್ಯಾಂಡ್ ಪ್ರೋ ಮೊಟ್ಟ ಮೊದಲ 50 ಡಿಬಿ ಹೈಬ್ರಿಡ್ ಎಎನ್‌ಸಿ ಸಾಧನವಾಗಿದ್ದು, ಈ ಬೆಲೆ ಶ್ರೇಣಿಯಲ್ಲಿ ಬೆಸ್ಟ್ ಇನ್ ಕ್ಲಾಸ್ ಎಎನ್‌ಸಿ ಅನ್ನು ಒದಗಿಸುತ್ತದೆ. ಎರಡೂ ಉತ್ಪನ್ನಗಳು ಉತ್ತಮ ಧ್ವನಿ ಗುಣಮಟ್ಟ, ದಕ್ಷ ವಿನ್ಯಾಸ, ದೀರ್ಘ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ. ಇದರಿಂದ ಆಧುನಿಕ ಜೀವನ ಶೈಲಿಗೆ ಬೇಕಿರುವ ಅಗತ್ಯ ಅಕ್ಸೆಸರಗಳನ್ನಾಗಿ ಇವು ಹೊರಹೊಮ್ಮಿವೆ.

ಸಿಎಂಎಫ್‌ ಬೈ ನಥಿಂಗ್ ಬಡ್ಸ್‌ ಬೆಲೆ ರೂ. 2499/- ಆಗಿದ್ದು, ಮಾರ್ಚ್‌ 8 ರಿಂದ ಮಾರಾಟ ಆರಂಭವಾಗಲಿದೆ ಮತ್ತು ಆರಂಭಿಕ ಬೆಲೆಯಾಗಿ ರೂ. 2299 ರಲ್ಲಿ ಲಭ್ಯವಿದೆ. ನೆಕ್‌ಬ್ಯಾಂಡ್ ಪ್ರೋ ಬೆಲೆ ರೂ. 1999 ಆಗಿದ್ದು, ಮಾರ್ಚ್ 11 ರಿಂದ ಆರಂಭಿಕ ದರ ರೂ. 1799 ರಲ್ಲಿ ಲಭ್ಯವಿರಲಿದೆ. ಈ ಎರಡೂ ಉತ್ಪನ್ನಗಳು ಫ್ಲಿಪ್‌ಕಾರ್ಟ್‌, ಮಿಂತ್ರಾ, ಕ್ರೋಮಾ ಮತ್ತು ವಿಜಯ್‌ ಸೇಲ್ಸ್‌ನಲ್ಲಿ ಸಿಗಲಿದೆ.

Leave a Comment

Advertisements

Recent Post

Live Cricket Update