Advertisements

ಬ್ರೆಜಿಲ್ ನಿಂದ ಮೊದಲ ಬಾರಿ ಉದ್ದಿನ ಬೇಳೆ ಆಮದು

ವದೆಹಲಿ: ಕೆಲವು ದೇಶಗಳ ಮೇಲೆ ಆಮದು ಅವಲಂಬನೆಯನ್ನು ವೈವಿಧ್ಯಗೊಳಿಸಲು, ದೇಶೀಯ ಉತ್ಪಾದನೆಯಲ್ಲಿನ ಕೊರತೆಯನ್ನು ನೀಗಿಸಲು ಭಾರತವು ಮೊದಲ ಬಾರಿಗೆ ಬ್ರೆಜಿಲ್ ನಿಂದ ಉದ್ದಿನ ಬೇಳೆಯನ್ನು ಪಡೆಯಲು ಪ್ರಾರಂಭಿಸಿದೆ.

ದಕ್ಷಿಣ ಅಮೆರಿಕಾದ ದೇಶದಿಂದ ಸುಮಾರು 3000 ಟನ್ ಉದ್ದಿನ ಬೇಳೆಯನ್ನು ಮೊದಲ ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

“ಒಂದು ದೇಶವನ್ನು ಅವಲಂಬಿಸುವುದರಿಂದ ಅಪಾಯವಿರುವುದರಿಂದ ಉದ್ದು ಮತ್ತು ತೊಗರಿ ಆಮದಿಗಾಗಿ ನಾವು ಬ್ರೆಜಿಲ್ ಮತ್ತು ಅರ್ಜೆಂಟೀನಾ ದೊಂದಿಗೆ ಕೆಲಸ ಮಾಡುತ್ತಿದ್ದೇವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವರ್ಷ ಬ್ರೆಜಿಲ್ ನಿಂದ ಸುಮಾರು 20,000 ಟನ್ ಉದ್ದು ಭಾರತಕ್ಕೆ ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.

ದೇಶೀಯ ಅಗತ್ಯ ಪೂರೈಸಲು ಉದ್ದು ಮತ್ತು ತೊಗರಿ ಬೇಳೆ ಸಂಗ್ರಹಿಸಲು ಸರ್ಕಾರವು ಬ್ರೆಜಿಲ್ ಮತ್ತು ಅರ್ಜೆಂಟೀನಾದೊಂದಿಗೆ ಸರಣಿ ಚರ್ಚೆಗಳನ್ನು ನಡೆಸಿದೆ.

ತಿಳಿವಳಿಕಾ ಒಡಂಬಡಿಕೆ ಅಡಿಯಲ್ಲಿ, ಭಾರತವು ಮ್ಯಾನ್ಮಾರ್‌ನಿಂದ ಮಾತ್ರ ಉದ್ದಿನ ಬೇಳೆಯನ್ನು ಆಮದು ಮಾಡಿಕೊಳ್ಳುತ್ತದೆ. ಅಲ್ಲಿ ಆಂತರಿಕ ಭದ್ರತಾ ಸಮಸ್ಯೆಗಳಿಂದಾಗಿ ಪೂರೈಕೆಯಲ್ಲಿ ಅಡಚಣೆಯಾಗಿದೆ.

ದಕ್ಷಿಣ ಅಮೆರಿಕಾದ ದೇಶಗಳಲ್ಲಿ ದ್ವಿದಳ ಧಾನ್ಯಗಳ ದೇಶೀಯ ಬಳಕೆ ಸಣ್ಣದಾಗಿದ್ದು, ಅನುಕೂಲಕರ ಹವಾಮಾನ ಪರಿಸ್ಥಿತಿಗಳಿಂದಾಗಿ ಬ್ರೆಜಿಲ್ ಮತ್ತು ಅರ್ಜೆಂಟೀನಾದಲ್ಲಿ ಉದ್ದು ಮತ್ತು ತೊಗರಿಯಂತಹ ದ್ವಿದಳ ಧಾನ್ಯಗಳನ್ನು ಬೆಳೆಯಬಹುದು ಮತ್ತು ಭಾರತಕ್ಕೆ ರಫ್ತು ಮಾಡುವ ಉದ್ದೇಶಕ್ಕಾಗಿ ಅಲ್ಲಿ ಬೆಳೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2023 ರಲ್ಲಿ ಭಾರತವು 2.98 ಮಿಲಿಯನ್ ಟನ್ (ಎಂಟಿ) ಬೇಳೆಕಾಳುಗಳನ್ನು ಆಮದು ಮಾಡಿಕೊಂಡಿದೆ

Leave a Comment

Advertisements

Recent Post

Live Cricket Update