Advertisements

ಒಳ್ಳೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಸಚಿವ ಶಿವಾನಂದ ಪಾಟೀಲ್

ಕೊಲ್ಹಾರ: ಮತಕ್ಷೇತ್ರದ ಪ್ರತಿ ಗ್ರಾಮಕ್ಕೂ ನೀರಾವರಿಯ ಮೂಲಕ ನೀರು ತಲುಪಿಸಲು ಕ್ರಮ ಕೈಗೊಂಡು ನೀರಿನ ಬವಣೆ ನೀಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆನೆ ಎಂದು ಎಪಿಎಂಸಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಹಣಮಾಪೂರ ಗ್ರಾಮದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ನಾಟಕ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು.

ಮತಕ್ಷೇತ್ರದಾದ್ಯಂತ ಜನತೆಗೆ ಕಳೆದ ಹದಿನೈದು ವರ್ಷಗಳಿಂದ ಒಂದೇ ಒಂದು ಟ್ರ್ಯಾಂಕರ್ ಬಳಸದೆ ನೀರಾವರಿಯ ಮೂಲಕ ನೀರು ಹರಿಸಲಾಗುತ್ತಿದೆ. ಬರಗಾಲದ ಪರಿಸ್ಥಿತಿ ಇದ್ದಾಗ್ಯೂ ಕೂಡ ಕೃಷ್ಣಾ ನದಿ ನೀರಿನ ಸಮರ್ಪಕ ಬಳಕೆಯಿಂದ ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ ಯಾವುದೇ ನೀರಿನ ಸಮಸ್ಯೆಯಿಲ್ಲ ಎಂದರು.

ಬರಗಾಲ ಬವಣೆಯಿಂದ ಮುಕ್ತಯಾಗಲು ಬೀರಲಿಂಗೇಶ್ವರ ಮುಂಗಾರಿ ಮಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟು ನಾಡಿನ ಜನರನ್ನು ಕಾಪಾಡಲಿ ಎಂದು ಪ್ರಾರ್ಥಿಸಿದರು. ಜಿಲ್ಲೆಯ ಬರಗಾಲದಿಂದ ಮುಕ್ತವಾಗಲು ಬಳೂತಿ, ಹಣಮಾಪೂರ ಮತ್ತು ಮಸೂತಿ ಜಾಕವೆಲ್ ಗಳು ಕಾರಣ ಎಂದರು.

ನಾಟಕಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡು ಇರುತ್ತವೆ, ಒಳ್ಳೆಯದನ್ನು ಮಾತ್ರ ಆಯ್ಕೆಮಾಡಿಕೊಂಡು ಕೆಟ್ಟದ್ದನ್ನು ಬಿಟ್ಟು ಬಿಡಬೇಕು ಎಂದರು.
ಸತ್ಯ ಹರಿಶ್ಚಂದ್ರ ನಾಟಕ ನೋಡಿ ಗಾಂಧೀಜಿ ಮಹಾತ್ಮರಾದರು ಜೀವನವೂ ಕೂಡಾ ಒಂದು ನಾಟಕವಿದ್ದಂತೆ, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಹುಟ್ಟು-ಸಾವಿನ ಮಧ್ಯೆ ಮನುಷ್ಯ ಎಲ್ಲರ ಮನಸ್ಸನ್ನು ಗೆಲ್ಲಬೇಕು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವೇ.ಮೂ ರುದ್ರಸ್ವಾಮಿ ಹಿರೇಮಠ, ಹಳ್ಳದ ಗೆಣ್ಣೂರಿನ ಸಿದ್ದಣ್ಣ ಪೂಜಾರಿ ವಹಿಸಿದ್ದರು. ಗ್ರಾ.ಪಂ ಅಧ್ಯಕ್ಷ ಶ್ರೀಕಾಂತ ಗಣಿ ಅಧ್ಯಕ್ಷತೆ ವಹಿಸಿದ್ದರು, ಯಲ್ಲಪ್ಪ ನಾಗರಾಳ ಜ್ಯೋತಿ ಬೆಳಗಿಸಿದರು, ಮುಖಂಡರಾದ ಮಾನಸಿಂಗ್ ಲಮಾಣಿ, ಯಮನಪ್ಪ ಮಾಕಾಳಿ, ಮುತ್ತು ಪೂಜಾರಿ, ಹಣಮಂತ ಮಾಕಾಳಿ, ಲಕ್ಷಣ ಚನಗೊಂಡ, ಸಂಗಪ್ಪ ಮಾಳೆದ, ರಮೇಶ ಸಾಲವಾಡಗಿ, ಸಂಗಮೇಶ ಪೂಜಾರಿ, ರಮೇಶ ಮುದಕವಿ, ಪ್ರಕಾಶ ಹಿಕಡಿ, ಗ್ರಾ.ಪಂ ಸದಸ್ಯ ನಿಂಗಪ್ಪ ಹಳ್ಳೂರ, ಸಂಗಮೇಶ ಕುಬಕಡ್ಡಿ, ಮಹೇಶ ತೋಟಗೇರ, ದುರ್ಗಪ್ಪ ಮಾದರ, ಶರಣಗೌಡ ಪಾಟೀಲ್, ನಾಗನಗೌಡ ಬಿರಾದಾರ, ಪರಪ್ಪ ಹಳ್ಳೂರ, ಬಾಬು ನರಿ, ಲಕ್ಷ್ಮಣ ಬಡಿಗೇರ, ಶಿವಪ್ಪ ಮುರನಾಳ, ಬಸಪ್ಪ ನರಿಯವರ, ಯಮನಪ್ಪ ಹೊಸೂರ, ಗೈಬುಸಾಬ ದಡೇದ, ದಸ್ತಗೀರಸಾಬ ಬಿದರಿ, ಶಂಕರ ಕೂಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment

Advertisements

Recent Post

Live Cricket Update