ಮುಂಬೈ: ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಕರಬಂಧ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮನೇಸರ್ನಲ್ಲಿ ವಿವಾಹ ಸಮಾರಂಭ ನೆರವೇರಿತು. ಇಬ್ಬರೂ ತಮ್ಮ ಕುಟುಂಬ, ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಹಸೆ ಮಣೆ ಏರಿದರು.
ಶನಿವಾರ ಪುಲ್ಕಿತ್-ಕೃತಿ ತಮ್ಮ ಅಧಿಕೃತ Instagram ಖಾತೆಯಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋ ಗಳಲ್ಲಿ, ಕೃತಿ ಗುಲಾಬಿ ಬಣ್ಣದ ಉಡುಪಿನಲ್ಲಿ ಸುಂದರ ವಧುವಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕುಂದನ್ ಆಭರಣಗಳನ್ನು ಧರಿಸಿದ್ದಾರೆ. ವರ ಪುಲ್ಕಿತ್ ಕೂಡ ಹಸಿರು ಬಣ್ಣದ ಶೇರ್ವಾನಿಯಲ್ಲಿ ಆಕರ್ಷಕವಾಗಿ ಕಾಣುತ್ತಿದ್ದಾರೆ. ಫೋಟೋಗಳಲ್ಲಿ ದಂಪತಿಗಳು ಪರಸ್ಪರರ ಕೈಗಳನ್ನು ಹಿಡಿದು ತುಂಬಾ ಸಂತೋಷ ವಾಗಿ ಕಾಣುತ್ತಾರೆ. ಕೃತಿ ವರ ಪುಲ್ಕಿತ್ನ ಹಣೆಯ ಮೇಲೆ ಮುತ್ತಿಡುತ್ತಿದ್ದರೆ, ಪುಲ್ಕಿತ್ ಕೂಡ ತನ್ನ ವಧುವಿನ ಕೊರಳಿಗೆ ಮಂಗಳಸೂತ್ರವನ್ನು ಧರಿಸಿರುವುದು ಕಂಡುಬರುತ್ತದೆ.
ಸದ್ಯ ನವದಂಪತಿಗಳ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಪ್ರೀತಿಯ ಮಳೆಯನ್ನೇ ಸುರಿಸುತ್ತಿದ್ದಾರೆ. ಜೊತೆಗೆ ಮದುವೆಯ ಶುಭಾಶಯ ಗಳನ್ನು ಕೋರುತ್ತಿದ್ದಾರೆ.
ಪುಲ್ಕಿತ್-ಕೃತಿ ತಮ್ಮ ತವರು ದೆಹಲಿಯಲ್ಲಿ ವಿವಾಹವಾದರು. ಮದುವೆಯ ಸ್ಥಳವಾಗಿ ಹರಿಯಾಣದ ಮನೇಸರ್ನಲ್ಲಿರುವ ಐಟಿಸಿ ಗ್ರ್ಯಾಂಡ್ ಭಾರತ್ ಪ್ಯಾಲೇಸ್ ಅನ್ನು ಆಯ್ಕೆ ಮಾಡಿಕೊಂಡರು. ವರದಿಗಳ ಪ್ರಕಾರ, ಕಳೆದ ಶುಕ್ರವಾರ ಸಂಜೆ ದಂಪತಿಗಳು ಪಂಜಾಬಿ ಪದ್ಧತಿಯಂತೆ ವಿವಾಹವಾದರು.