Advertisements

ಮೊದಲ ಅಂಡರ್ ವಾಟರ್ ಮೆಟ್ರೋಗೆ ಉತ್ತಮ ರೆಸ್ಪಾನ್ಸ್

ಕೋಲ್ಕತ್ತಾ : ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋಗೆ ಮೊದಲ ದಿನವೇ ಪ್ರಯಾಣಿಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹೌದು, ಮೊದಲ ದಿನವೇ 70,000 ಕ್ಕೂ ಹೆಚ್ಚು ಪ್ರಯಾಣಿಕರು ರೈಲಿನಲ್ಲಿ ಸಂಚಾರ ಮಾಡಿದ್ದಾರೆ.

ದೇಶದ ಮೊದಲ ನೀರೊಳಗಿನ ಸಾರಿಗೆ ಸುರಂಗದ ಮೂಲಕ ಹೂಗ್ಲಿ ನದಿಯ ಕೆಳಗೆ ಹಾದುಹೋಗುವ ಹೌರಾ ಮೈದಾನ್-ಎಸ್ಪ್ಲನೇಡ್ ಮೆಟ್ರೋದಲ್ಲಿ ಮೊದಲ ದಿನದಂದು 70,000 ಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾ.6 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಉದ್ಘಾಟಿಸಿದ ನಂತರ ಶುಕ್ರವಾರ ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಪ್ರಾರಂ ಭವಾಯಿತು. ಈ ಪೈಕಿ 23,444 ಜನರು ಹೌರಾ ಮೈದಾನದಲ್ಲಿ ಮತ್ತು 20,923 ಪ್ರಯಾಣಿಕರು ಹೌರಾದಲ್ಲಿ ಹತ್ತಿದ್ದಾರೆ ಎಂದು ಹೇಳಿದರು.

ಅಂಡರ್ ವಾಟರ್ ಮೆಟ್ರೋದಲ್ಲಿ ಪ್ರಯಾಣಿಕರು ಪ್ರಯಾಣ ಮಾಡಿ ಸಖತ್ ಎಂಜಾಯ್ ಮಾಡಿದ್ದಾರೆ.

Leave a Comment

Advertisements

Recent Post

Live Cricket Update