Advertisements

400 ವರ್ಷಗಳ ಹಿಂದೆ ಮುಳುಗಿದ್ದ ವಾಣಿಜ್ಯ ಹಡಗಿಗಾಗಿ ಶೋಧ ಆರಂಭ

ಇಂಗ್ಲೆಂಡ್: 17ನೇ ಶತಮಾನದಲ್ಲಿ ಅಂದರೆ ಸುಮಾರು 400 ವರ್ಷಗಳ ಹಿಂದೆ ಮುಳುಗಿದ್ದ ವಾಣಿಜ್ಯ ಹಡಗು ಮುಳುಗಿತ್ತು. ಇದರಲ್ಲಿ ಬರೋಬ್ಬರಿ 4 ಬಿಲಿಯನ್ ಪೌಂಡ್ (181 ಕೋಟಿ ಕೆಜಿ) ಚಿನ್ನ ಇದೆ ಎಂದು ಅಂದಾಜಿಸಲಾಗಿದ್ದು, ಅದಕ್ಕಾಗಿ ಹುಡುಕಾಟ ಆರಂಭಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಈ ಹಡಗು ಎಲ್ಲಿ ಮುಳುಗಿದೆ ಎಂದು ಪತ್ತೆ ಮಾಡಲು ತಜ್ಞರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಎಲ್ ಡೊರಾಡೋ ಆಫ್ ದಿ ಸೀಸ್’ ಎಂಬ ಹಡಗು 1641ರಲ್ಲಿ ಕಾರ್ನ್‌ವಾಲ್‌ ತೀರದಲ್ಲಿ ಮುಳುಗಿತ್ತು. ಇದರಲ್ಲಿ ಬಿಲಿಯನ್‌ಗಟ್ಟಲೆ ಪೌಂಡ್ ತೂಕದ ಚಿನ್ನ ಹಾಗೂ ಬೆಳ್ಳಿಯನ್ನು ಹೊತ್ತು ತರಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಮಲ್ಟಿಬೀಮ್ ಸರ್ವೀಸಸ್ ಅನ್ನೋ ಸಂಸ್ಥೆ ಮುಳುಗಿದ ಹಡಗು ಪತ್ತೆ ಮಾಡುವುದರಲ್ಲಿ ನಿಸ್ಸೀಮ. ತಂತ್ರಜ್ಞರು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹಡಗು ಎಲ್ಲಿ ಮುಳುಗಿರಬಹುದು ಎಂದು ಪತ್ತೆ ಮಾಡಲು ಮುಂದಾಗಿದ್ದಾರೆ. ಈ ಹಡಗಿನ ಪತ್ತೆಯಿಂದ ಅಪಾರ ಪ್ರಮಾಣದ ಚಿನ್ನ ಹಾಗೂ ಬೆಳ್ಳಿ ಸಿಗುವುದಕ್ಕಿಂತ ಮೇಲಾಗಿ ಐತಿಹಾಸಿಕ ಮೌಲ್ಯ ಇರುವ ಕಾರಣ ಅವುಗಳ ಪತ್ತೆ ಅತ್ಯಂತ ಮುಖ್ಯ ಎಂಬ ಕಾರಣಕ್ಕೆ ಹುಡುಕಾಟ ನಡೆಸ ಲಾಗುತ್ತಿದೆ.

ಐತಿಹಾಸಿಕ ದಾಖಲೆಯಂತೆ 1641ರ ಸೆಪ್ಟೆಂಬರ್ 23 ರಂದು ಹಡಗು ಮುಳುಗಿತ್ತು. ಅಮೆರಿಕದ ಮೆಕ್ಸಿಕೋ ಹಾಗೂ ಕೆರಿಬಿಯನ್ ದ್ವೀಪ ಸಮೂಹದಿಂದ ಬ್ರಿಟನ್‌ನತ್ತ ಬರುತ್ತಿದ್ದಾಗ ಇಂಗ್ಲಿಷ್ ಕಾಲುವೆಯಲ್ಲಿ ಪತನವಾಗಿತ್ತು.

Leave a Comment

Advertisements

Recent Post

Live Cricket Update