ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, 15 ತಿಂಗಳವರೆಗಿನ ಅವಧಿಯ ಫಿಕ್ಸೆಡ್ ಡಿಪಾಸಿಟ್ ಗಳ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಿಸಿದೆ – ಸಾಮಾನ್ಯ ಗ್ರಾಹಕರಿಗೆ 8.50%, ಹಿರಿಯ ನಾಗರಿಕರಿಗೆ 9.00%.
ಮುಖ್ಯಾಂಶಗಳು:
• ಸಾಮಾನ್ಯ ಗ್ರಾಹಕರಿಗೆ, ಎನ್.ಆರ್.ಒ. ಮತ್ತು ಎನ್.ಆರ್.ಇ. ಗ್ರಾಹಕರಿಗೆ ಅತೀ ಹೆಚ್ಚಿನ ಬಡ್ಡಿ ದರ – 15 ತಿಂಗಳವರೆಗೆ 8.50%
• ಹಿರಿಯ ನಾಗರಿಕರಿಗೆ ಅತೀ ಹೆಚ್ಚಿನ ಬಡ್ಡಿ ದರ – 15 ತಿಂಗಳಿಗೆ 9.00%
• ಪ್ಲಾಟಿನಾ ಎಫ್.ಡಿ ಗೆ 0.20% ಹೆಚ್ಚುವರಿ ಬಡ್ಡಿ ದರ ದೊರೆಯುತ್ತದೆ ಮತ್ತು ಇದು 1 ಕೋಟಿಗಿಂತ ಹೆಚ್ಚು ಆದರೆ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಮಾತ್ರ ಅನ್ವಯಿಸುತ್ತದೆ.
• ಈಗ ಗ್ರಾಹಕರು ನಮ್ಮ ಅಧಿಕೃತ ವೆಬ್‌ಸೈಟ್ ಮೂಲಕವೂ ಎಫ್.ಡಿ ಗಳನ್ನು ತೆರೆಯಬಹುದು
ಉಜ್ಜೀವನ್ ಎಸ್‌ಎಫ್‌ಬಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಇಟ್ಟೀರ ಡೇವಿಸ್ ಹೀಗೆ ಹೇಳಿದರು: “ಅಲ್ಪಾವಧಿಯ ಠೇವಣಿಗಳಿಗೆ ಹೆಚ್ಚಿನ ಬಡ್ಡಿದರವನ್ನು ಬಯಸುವ ನಮ್ಮ ಗ್ರಾಹಕರಿಗಾಗಿ ಎಫ್.ಡಿ. ಬಡ್ಡಿದರಗಳನ್ನು ಪರಿಷ್ಕರಿಸಿದ್ದೇವೆಂದು ಪ್ರಕಟಿಸಲು ನಮಗೆ ಸಂತೋಷವಾಗುತ್ತಿದೆ. ನಮ್ಮ ಮೂಲ ಉದ್ದೇಶ: ಪ್ರಮುಖ ರೀಟೇಲ್ ಮಾಸ್ ಮಾರ್ಕೆಟ್ ಬ್ಯಾಂಕ್ ಎಂಬ ನಮ್ಮ ಸ್ಥಾನವನ್ನು ಬಲಪಡಿಸಲು ನಮ್ಮ ಸಮಗ್ರ ಕಾರ್ಯತಂತ್ರದೊಂದಿಗೆ ಹೊಂದಿಕೆಯಾಗುವಂತೆ ಬಲವಾದ ಠೇವಣಿ ನೆಲೆಯನ್ನು ಸೃಷ್ಟಿಸುವುದು.”
ಸಾಮಾನ್ಯ, ಎನ್.ಆರ್.ಒ. ಮತ್ತು ಎನ್.ಆರ್.ಇ. ಗ್ರಾಹಕರಿಗಾಗಿ, ಮಾರ್ಚ್ 7, 2024 ರಿಂದ ಜಾರಿಗೆ ಬರುವಂತೆ, ಮೂರು ಪ್ರಮುಖ ವರ್ಗಗಳಲ್ಲಿ ROI ಗೆ ಹೊಂದಾಣಿಕೆಗಳನ್ನು ಮಾಡಲಾಗಿದೆ
ಪ್ಲಾಟಿನಾ ಎಫ್.ಡಿ ಗೆ 0.20% ಹೆಚ್ಚುವರಿ ಬಡ್ಡಿ ದರ ದೊರೆಯುತ್ತದೆ ಮತ್ತು ಇದು 1 ಕೋಟಿಗಿಂತ ಹೆಚ್ಚು ಆದರೆ 2 ಕೋಟಿ ರೂಗಳಿಗಿಂತ ಕಡಿಮೆ ಠೇವಣಿಗಳಿಗೆ ಮಾತ್ರ ಅನ್ವಯಿಸುತ್ತದೆ.
ಉಜ್ಜೀವನ್ ಎಸ್.ಎಫ್.ಬಿ., ಮಾಸಿಕ, ತ್ರೈಮಾಸಿಕ ಮತ್ತು ಮೆಚ್ಯುರಿಟಿ ಆದಾಗ ಬಡ್ಡಿ ಪಡೆಯುವ ಆಯ್ಕೆಗಳನ್ನು ನೀಡುತ್ತದೆ. ತೆರಿಗೆ ಉಳಿತಾಯದ ಫಿಕ್ಸೆಡ್ ಡೆಪಾಸಿಟ್‌ಗಳಿಗೆ ಐದು ವರ್ಷಗಳ ಲಾಕ್-ಇನ್ ಅವಧಿ ಅನ್ವಯವಾಗುತ್ತದೆ.
ಎಫ್.ಡಿ. ಗಳ ಮೇಲಿನ ಇತ್ತೀಚಿನ ಬಡ್ದಿ ದರ ಹೆಚ್ಚಳದ ಪರಿಣಾಮವಾಗಿ ಉಜ್ಜೀವನ್ ಎಸ್.ಎಫ್.ಬಿ.: ಸಾವಧಿ ಠೇವಣಿಗಳ ಮೇಲೆ ಅತೀ ಹೆಚ್ಚಿನ ಬಡ್ಡಿ ದರಗಳನ್ನು ನೀಡುವ ಬ್ಯಾಂಕ್‌ಗಳಲ್ಲಿ ಒಂದಾಗಿದೆ.