ಬೆಂಗಳೂರು: ನವೀನ ನಗರ ಸಾರಿಗೆ ಉತ್ಪನ್ನ ಪೂರೈಕೆದಾರರಾದ ನೆಕ್ಸ್‌ಝು ಮೊಬಿಲಿಟಿ, ಅದರ ಬಂಝಿಂಗಾ ಮತ್ತು ರೋಡ್ ಲಾರ್ಕ್ ಶ್ರೇಣಿಯ ಉತ್ಪನ್ನಗಳ ಅಡಿಯಲ್ಲಿ ನಾಲ್ಕು ಹೊಸ ವೇರಿಯಂಟ್ ಗಳನ್ನು ಬಿಡುಗಡೆ ಮಾಡಿದೆ.
ಈ ಎರಡೂ ಎಲೆಕ್ಟ್ರಿಕ್-ಸೈಕಲ್ ಗಳು ಈಗ 5.2 ಎಎಚ್ ನಿಂದ ಆರಂಭಿಸಿ 14.5 ಎಎಚ್ ವರೆಗೆ ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುವ ಸ್ವಾಪ್(ವಿನಿಮಯ) ಮಾಡಬಹುದಾದ ಬ್ಯಾಟರಿಗಳನ್ನು ಹೊಂದಿವೆ. ಇದನ್ನು ಅವರ ಪ್ರಾರಂಭಿಕ ಹಂತದ ಶ್ರೇಣಿಯಾಗಿರುವ ರಾಂಪಸ್ ಪ್ಲಸ್ ಜೊತೆಗೆ ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ರೂಪಿಸಲಾಗಿದೆ.
ರೋಡ್‌ಲಾರ್ಕ್ ಮತ್ತು ಬಝಿಂಗಾ ಶ್ರೇಣಿಯ ಇವಿ- ಸೈಕಲ್‌ಗಳು ಈಗ 5.2 ಎಎಚ್, 8.7 ಎಎಚ್ ಮತ್ತು 14.5 ಎಎಚ್ ನ 3 ವಿಭಿನ್ನ ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ಹೊಂದಿದ್ದು, ಇದು ಕ್ರಮವಾಗಿ 30 ಕಿಮೀ, 45 ಕಿಮೀ ಮತ್ತು 100 ಕಿಮೀ ರೇಂಜ್ ಅನ್ನು ಒದಗಿಸುತ್ತದೆ. ಪರಿಷ್ಕೃತ ಬ್ಯಾಟರಿ ಆಯ್ಕೆಗಳ ಮೂಲಕ, ಗ್ರಾಹಕರು ಈಗ ತಮ್ಮ ಅವಶ್ಯಕತೆಯ ಆಧಾರದ ಮೇಲೆ ಇವಿ ಸೈಕಲ್‌ಗಳನ್ನು ಖರೀದಿಸಲು ಆಯ್ಕೆ ಮಾಡಬಹುದು. ಅಲ್ಲದೇ ಅವರ ಖರೀದಿ ವೆಚ್ಚಗಳನ್ನು ಕೂಡ ಕಡಿಮೆ ಮಾಡಿಕೊಳ್ಳ ಬಹುದು. ಎಲ್ಲಾ ಮೂರು ಬ್ಯಾಟರಿಗಳ ಆಯ್ಕೆಗಳು ಸ್ವ್ಯಾಪ್ (ವಿನಿಮಯ) ಮಾಡಿಕೊಳ್ಳಬಹುದಾದ ಮತ್ತು ಬ್ಯಾಟರಿಗಳನ್ನು ಸುಲಭವಾಗಿ ಮನೆಗೆ ಸಾಗಿಸಿ ಚಾರ್ಜ್‌ಗೆ ತೆಗೆದುಕೊಂಡು ಹೋಗಬಹುದಾದ ಹೆಚ್ಚುವರಿ ಅನುಕೂಲತೆಗಳ ಜೊತೆಗೆ ಲಭ್ಯವಾಗಲಿದೆ. ಇದರೊಂದಿಗೆ, ಎತ್ತರದ ಪ್ರದೇಶದಲ್ಲಿ ವಾಸಿಸುವ ಹೆಚ್ಚಿನ ಜನರು ಎಲೆಕ್ಟ್ರಿಕ್ ಸೈಕಲ್ ಗಳನ್ನು ಬಳಸಿಕೊಳ್ಳಬಹುದಾಗಿದೆ.
ನೆಕ್ಸ್‌ಝು ಮೊಬಿಲಿಟಿಯ ಬಿಸಿನೆಸ್ ಹೆಡ್ ಶ್ರೀ ಚಿಂತಾಮಣಿ ಸರ್ದೇಸಾಯಿ ಮಾತನಾಡಿ, “ಆಕರ್ಷಕ ಬೆಲೆಯಲ್ಲಿ ಸ್ವ್ಯಾಪ್ ಮಾಡಬಹುದಾದ ಬ್ಯಾಟರಿಗಳನ್ನು ಪರಿಚಯಿಸುವ ಮೂಲಕ, ಇವಿ ಸೈಕಲ್ ಪ್ರಸ್ತುತ ಇವಿ 2ಡಬ್ಲ್ಯೂ ಉದ್ಯಮದಲ್ಲಿನ ಅತ್ಯಂತ ಲಾಭದಾಯಕ ಉತ್ಪನ್ನ ಆಗಿದೆ. ಪೆಡಲ್ ಮಾಡುವ ಆಯ್ಕೆಯ ಮೂಲಕ ಒಂದೇ ಬಾರಿ ಖರ್ಚು ಮಾಡುವ ಮೂಲಕ ಈ ಸೈಕಲ್ ಪಡೆಯಬಹುದಾಗಿದೆ. ಇವಿ ಸೈಕಲ್‌ಗಳು ಕಡಿಮೆ ದೂರದ ಪ್ರಯಾಣದ ವೈಯಕ್ತಿಕ ಬಳಕೆಗಾಗಿ ಮತ್ತು ವಾಣಿಜ್ಯ ಬಳಕೆಗಾಗಿ ಸೂಕ್ತವಾದ ಆಯ್ಕೆಯಾಗಿದೆ. ನಮ್ಮ ಹೊಸ ಉತ್ಪನ್ನ ಪರಿಚಯ ಮಾಡುವುದರ ಮೂಲಕ ಗ್ರಾಹಕರು ಈಗ ತಮ್ಮ ಅಗತ್ಯದ ಆಧಾರದ ಮೇಲೆ ಸೈಕಲ್ ಮತ್ತು ವೇರಿಯಂಟ್ ಅನ್ನು ಆಯ್ಕೆ ಮಾಡಬಹುದು. ಆ ಮೂಲಕ ಇವಿ ಸೈಕಲ್‌ಗಳ ಅಳವಡಿಕೆಯನ್ನು ಹೆಚ್ಚಿಸಬಹುದು” ಎಂದು ಹೇಳಿದರು.
ಹೊಸ ವೇರಿಯಂಟ್ ಗಳ ಜೊತೆಗೆ ಪರಿಷ್ಕೃತ ದರ ಪಟ್ಟಿ
Model | Battery Capacity | Price |
Rompus Plus | 5.2 Ah | INR 29,900 |
Bazinga | 5.2 Ah (new variant) | INR 32,950 |
8.7 Ah (new variant) | INR 35,950 | |
14.5 Ah | INR 39,950 | |
Roadlark | 5.2 Ah (new variant) | INR 32,950 |
8.7 Ah (new variant) | INR 35,950 | |
14.5 Ah | INR 39,950 | |
Model | Battery Capacity | Price |
Rompus Plus | 5.2 Ah | INR 29,900 |
Bazinga | 5.2 Ah (new variant) | INR 32,950 |
8.7 Ah (new variant) | INR 35,950 | |
14.5 Ah | INR 39,950 | |
Roadlark | 5.2 Ah (new variant) | INR 32,950 |
8.7 Ah (new variant) | INR 35,950 | |
14.5 Ah | INR 39,950 |
ಬಝಿಂಗಾ ಪುರುಷ ಮತ್ತು ಸ್ರ್ತೀಯರು ಇಬ್ಬರೂ ಬಳಸಬಹುದಾದ ಉತ್ಪನ್ನವಾಗಿದ್ದು, ಆಧುನಿಕ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ರಚಿಸಲಾಗಿದೆ ಮತ್ತು ವಿನ್ಯಾಸಗೊಳಿಸಲಾಗಿದೆ. ಈ ಉತ್ಪನ್ನ ಅನೇಕ ವೈಶಿಷ್ಟ್ಯಗಳೊಂದಿಗೆ ಅಪೂರ್ವ ಸೌಂದರ್ಯವನ್ನು ಹೊಂದಿದೆ. ರೋಡ್‌ಲಾರ್ಕ್ ಕ್ರೀಡಾ ಚಟುವಟಿಕೆಗಳಿಗಾಗಿಯೇ ನಗರದಲ್ಲಿರುವ ಪುರುಷ ಗ್ರಾಹಕರನ್ನು ಗುರಿಯಾಗಿಸಿಕೊಂಡು ತಯಾರಿಸಿದ ಪ್ರಮುಖ ಉತ್ಪನ್ನವಾಗಿದೆ. ರಾಂಪಸ್ ಪ್ಲಸ್ ಶ್ರೇಣಿಯು ನೆಕ್ಸ್‌ಝು ನ ಸ್ಥಿರ ಪ್ರದರ್ಶನ ನೀಡುವ, ಪ್ರವೇಶ ಮಟ್ಟದ ಉತ್ಪನ್ನವಾಗಿದೆ. ಇದು ತೊಂದರೆ- ಮುಕ್ತ ದೈನಂದಿನ ಪ್ರಯಾಣವನ್ನು ಸುಲಭ ಸಾಧ್ಯ ಮಾಡಲೆಂದೇ ವಿನ್ಯಾಸಗೊಳಿಸಲಾಗಿದೆ. ತ್ವರಿತ ವಾಣಿಜ್ಯ ಕಂಪನಿಗಳಿಗೆ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡಲು ರೂ.1750ರ ಹೆಚ್ಚುವರಿ ವೆಚ್ಚದಲ್ಲಿ ರೋಡ್‌ಲಾರ್ಕ್ ಮತ್ತು ಬಝಿಂಗಾ ಸಹ ಸರಕು ಆಯ್ಕೆಯೊಂದಿಗೆ ಲಭ್ಯವಿದೆ.
ಭಾರತೀಯ ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ಸೈಕ್ಲಿಂಗ್ ಕುರಿತಾಗಿ ಮರುಚಿಂತನೆ ಮಾಡಲು ಮತ್ತು ಸುಸ್ಥಿರ ಸಾರಿಗೆಯ ಗಡಿಗಳನ್ನು ವಿಸ್ತರಣೆ ಮಾಡಲು ನೆಕ್ಸ್‌ಝು ಇವಿ- ಸೈಕಲ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಎಲ್ಲಾ ನೆಕ್ಸ್‌ಝು ಉತ್ಪನ್ನಗಳನ್ನು ದೇಶೀಯ ಮತ್ತು ಜಾಗತಿಕ ಗ್ರಾಹಕರಿಗಾಗಿ ಭಾರತದಲ್ಲಿ ತಯಾರಿಸಲಾಗಿದೆ.