Advertisements

ಮರಳಿ ಕಮಲ ಹಿಡಿದ ಸೊಗಡು

ತುಮಕೂರು: ಕಳೆದ ವಿಧಾನಸಭಾ ಚುನಾವಣೆ ನಂತರ ಬಿಜೆಪಿ ಒಡನಾಟದಿಂದ ದೂರವಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಮರಳಿ ಬಿಜೆಪಿಗೆ ಸೇರ್ಪಡೆಯಾದರು.

ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ದೇಶ ಭಕ್ತ ಸಮಾನ ಮನಸ್ಕ ಕಾರ್ಯಕರ್ತರ ಮಿಲನ ಕಾರ್ಯ ಕ್ರಮದಲ್ಲಿ ಮಾಜಿ ಸಚಿವ ಸಿ.ಟಿ.ರವಿ, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರ ಸಮ್ಮುಖದಲ್ಲಿ ಸೊಗಡು ಶಿವಣ್ಣ ಅವರಿಗೆ ಪಕ್ಷದ ಶಾಲು ಹೊದಿಸಿ ಬಿಜೆಪಿಗೆ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಸಿ.ಟಿ.ರವಿ, ರಾಜಕಾರಣದಲ್ಲಿ ಕೆಟ್ಟ ಕಾಲ, ಒಳ್ಳೆಯ ಕಾಲ ಅಂತ ಇರುತ್ತದೆ. ಸೊಗಡು ಶಿವಣ್ಣನವರಿಗೆ ಕೆಟ್ಟ ಕಾಲ ಮುಗಿದು ಈಗ ಒಳ್ಳೆಯ ಕಾಲ ಬಂದಿದೆ, ಇನ್ನು ಮುಂದೆ ಇವರು ಪಕ್ಷ ಹಾಗೂ ದೇಶ ಕಟ್ಟುವ ಕಾರ್ಯದಲ್ಲಿ ಸಕ್ರಿಯ ವಾಗಿ ತೊಡಗಿಕೊಳ್ಳಲಿ ಎಂದು ಶುಭ ಕೊರಿದರು.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು ಮುಂದಿನ ಜನ್ಮ ಅಂತ ಇದ್ದರೆ ನಾನು ಮುಸ್ಲಿಂ ಆಗಿ ಹುಟ್ಟಲು ಬಯಸುತ್ತೇನೆ ಎಂದು ಹೇಳಿದ್ದರು. ಮುಂದಿನ ಜನ್ಮದವರೆಗೂ ಯಾಕೆ ಕಾಯುವಿರಿ, ಈಗಲೇ ಆ ಧರ್ಮಕ್ಕೆ ಮತಾಂತರವಾಗಿರಿ ಯಾರು ಬೇಡ ಎಂದಿದ್ದಾರೆ ಎಂದು ವ್ಯಂಗ್ಯವಾಡಿದರು.

ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ಸೊಗಡು ಶಿವಣ್ಣ, ನಾನು ಹಳೆಯ ಗೆಳೆಯರು, ಪಕ್ಷಕ್ಕೆ ಇವರ ಕೊಡುಗೆ ಅಪಾರವಾಗಿದೆ. ಇವರು ಮತ್ತೆ ಬಿಜೆಪಿಗೆ ವಾಪಸ್ಸಾಗಿರುವುದು ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಿದೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಿ ನನ್ನನ್ನು ಗೆಲ್ಲಿಸಿ ಮೋದಿಯವರು ಮತ್ತೊಮ್ಮೆ ಪ್ರಧಾನಿ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಬಿ.ಕೆ.ಮಂಜುನಾಥ್, ಸ್ಫೂರ್ತಿ ಚಿದಾನಂದ್, ಸೊಗಡು ಕುಮಾರಸ್ವಾಮಿ, ಸೊಗಡು ಸಿದ್ದಲಿಂಗ ಸ್ವಾಮಿ, ಎಸ್.ಆರ್.ಶ್ರೀಧರ ಮೂರ್ತಿ, ಪಂಚಾಕ್ಷರಯ್ಯ, ಕೆ.ಎಸ್.ಸದಾಶಿವಯ್ಯ, ನಂಜೇಗೌಡ, ಕೆ.ಪಿ.ಮಹೇಶ್, ಡಿ.ಎಂ.ಸತೀಶ್, ಗೋಕುಲ ಮಂಜುನಾಥ್, ನಂಜುಂಡಪ್ಪ , ಆಟೋ ನವೀನ್ ಕುಮಾರ್, ಪವನ್ ಕುಮಾರ್, ಬನಶಂಕರಿ ಬಾಬು, ಬಸವರಾಜ್ ಮತ್ತಿತರರು ಭಾಗವಹಿಸಿದ್ದರು.

*
ಮೋದಿ ಪ್ರಧಾನಿ ಆಗಬೇಕೆಂಬುದು ನಮ್ಮೆಲ್ಲರ ಆಶಯ. ಹಳೆಯದನೆಲ್ಲ ಮರೆತು ಮರಳಿ ಬಿಜೆಪಿ ಸೇರುತ್ತಿದ್ದೇನೆ. ಬಿಜೆಪಿ ನನ್ನ ಮಾತೃ ಪಕ್ಷ.

ಸೊಗಡು ಶಿವಣ್ಣ ,ಮಾಜಿ ಸಚಿವ.

Leave a Comment

Advertisements

Recent Post

Live Cricket Update