Advertisements

ಗೆಲುವಿನ ಖಾತೆ ತೆರೆದ ರಾಯಲ್ ಚಾಲೆಂಜರ್ಸ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(IPL2024) ನ 17ನೇ ಸೀಸನ್​ನ ಆರನೇ ಪಂದ್ಯ ಸೋಮವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವೆ ನಡೆಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಪಂಜಾಬ್​ ಕಿಂಗ್ಸ್​ ತಂಡವು ನಿಗದಿತ 20 ಓವರ್​ಗೆ 6 ವಿಕೆಟ್ ನಷ್ಟಕ್ಕೆ 176 ರನ್​ ಗಳಿಸಿತು. ಮೊತ್ತ ಬೆನ್ನಟ್ಟಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ (Virat Kohli) ಅವರ ಅದ್ಭುತ ಬ್ಯಾಟಿಂಗ್​ ಮೂಲಕ ನಿಗದಿತ 19.2 ಓವರ್​ ಗೆ 6 ವಿಕೆಟ್ ನಷ್ಟಕ್ಕೆ 178 ರನ್​ ಗಳಿಸುವ ಮೂಲಕ 4 ವಿಕೆಟ್​ ಗಳ ಭರ್ಜರಿ ಗೆಲುವು ದಾಖಲಿಸಿದರು. ಈ ಮೂಲಕ ಆರ್​ಸಿಬಿ ತಂಡ ಸೀಸನ್​ ನ ಮೊದಲ ಗೆಲುವು ದಾಖಲಿಸಿದೆ.

ಟಾಸ್​ ಗೆದ್ದು ಬೌಲಿಂಗ್​ ಮಾಡಿದ ಆರ್​ಸಿಬಿ ತಂಡಕ್ಕೆ ಪಂಜಾಬ್​ ತಂಡ 177 ರನ್​ ಗಳ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ಆರಂಭ ದಲ್ಲಿಯೇ ನಾಯಕ ಫಾಫ್​ ಡುಪ್ಲೇಸಿಸ್​​ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು. ಫಾಫ್​ 3 ರನ್​ ಸಿಡಿಸಿ ಔಟ್​ ಆದರೆ, ಕ್ಯಾಮರೂನ್​ ಗ್ರೀನ್​ ಸಹ 3 ರನ್​ ಗಳಿಸಿ ಪೆವೆಲಿಯನ್​ ಸೇರಿದರು. ರಜತ್​ ಪಾಟಿದಾರ್​​ 18 ರನ್​ ಗಳಿಸಿ ಔಟ್​​ ಆದರೆ ಗ್ಲೇನ್​ ಮ್ಯಾಕ್ಸ್​​ವೆಲ್​ ಮತ್ತೊಮ್ಮೆ ವಿಫಲರಾದರು.

ಪಂಜಾಬ್​ ವಿರುದ್ಧ ಏಕಾಂಗಿಯಾಗಿ ಅಬ್ಬರಿಸಿದ ವಿರಾಟ್ ಕೊಹ್ಲಿ ಒಂದೆಡೆ ಫೋರ್​ ಗಳ ಸುರಿಮಳೆಗೈದರು. ಈ ಮೂಲಕ ಕೊಹ್ಲಿ 49 ಎಸೆತದಲ್ಲಿ 11 ಫೋರ್​ ಮತ್ತು 2 ಸಿಕ್ಸ್​ ಮೂಲಕ 77 ರನ್​ ಸಿಡಿಸಿದರು. ಅನುಜತ್​ ರಾವತ್​ ಸಹ ಕೇವಲ 11 ರನ್​ ಗಳಿಸಿ ಎಲ್​ಬಿ ಬಲೆಗೆ ಬಲಿಯಾದರು.

ಕೊಹ್ಲಿ ವಿಕೆಟ್ ಪತವಾಗುತ್ತಿದ್ದಂತೆ ಒಮ್ಮೆಲೆ ಪಂದ್ಯ ಪಂಜಾಬ್​ ಕಡೆ ವಾಲಿದಂತಾಯಿತು. ಕೊನೆಯಲ್ಲಿ ದಿನೇಶ್​​ ಕಾರ್ತಿಕ್​ ಮತ್ತು ಇಂಫ್ಯಾಕ್ಟ್​ ಪ್ಲೇಯರ್​ ಆಗಿದ್ದ ಮಹಿಪಾಲ್​ ಲೋಮ್ರೋರ್​ ಅವರ ಅದ್ಭುತ ಜೊತೆಯಾಟದ ಮೂಲಕ​ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ವೇಳೆ ದಿನೇಶ್​​ ಕಾರ್ತಿಕ್​ 10 ಎಸೆತದಲ್ಲಿ 2 ಸಿಕ್ಸ್​ ಮತ್ತು 3 ಬೌಂಡರಿ ಮೂಲಕ 28 ರನ್​ ಹಾಗೂ ಲೋಮ್ರೋರ್​ 8 ಎಸೆತದಲ್ಲಿ 1 ಸಿಕ್ಸ್​ ಮತ್ತು 2 ಫೋರ್ ಮೂಲಕ 17 ರನ್​ ಗಳಿಸಿ ಮಿಂಚಿದರು.

ಪಂಜಾಬ್​ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಶಿಖರ್ ಧವನ್ 45 ರನ್, ಪ್ರಭಾಸಿಮ್ರಾನ್ ಸಿಂಗ್ 28 ರನ್, ಲಿವಿಂಗ್‌ಸ್ಟೋನ್ 17 ರನ್, ಸ್ಯಾಮ್ ಕರನ್ 23 ರನ್, ಜಾನಿ ಬೇರ್​ಸಅಟೋ 8 ರನ್, ಲೀವಿಂಗ್​ಸ್ಟನ್​ 17 ರನ್, ಜಿತೇಶ್ ಶರ್ಮಾ 27 ರನ್ ಮತ್ತು ಸುಶಾಂಕ್ ಸಿಂಗ್ 21 ರನ್ ಗಳಿಸಿದರು. ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ 2 ವಿಕೆಟ್, ಗ್ಲೆನ್ ಮ್ಯಾಕ್ಸ್‌ವೆಲ್ 2 ವಿಕೆಟ್ ಪಡೆದರೆ, ಯಶ್ ದಯಾಲ್ 1 ವಿಕೆಟ್, ಅಲ್ಜಾರಿ ಜೋಸೆಫ್ 1 ವಿಕೆಟ್ ಪಡೆದರು. ಪಂಜಾಬ್ ಕಿಂಗ್ಸ್ 10 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು.

Leave a Comment

Advertisements

Recent Post

Live Cricket Update