Advertisements

ಮಿಸ್ ಯೂನಿವರ್ಸ್ 2024 ಸೌಂದರ್ಯ ಸ್ಪರ್ಧೆಯಲ್ಲಿ ಸೌದಿ ಬ್ಯೂಟಿ ಸ್ಪರ್ಧೆ

ಸೌದಿ ಅರೇಬಿಯಾ: ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಶ್ರೀಮಂತ ರಾಷ್ಟ್ರ ಸೌದಿ ಅರೇಬಿಯಾದಿಂದ ಮಿಸ್ ಯೂನಿವರ್ಸ್ 2024 ಸೌಂದರ್ಯ ಸ್ಪರ್ಧೆಯಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪರ್ಧಿಸಲಿದೆ.

ಸೌದಿ ಅರೇಬಿಯಾದಿಂದ ಒಬ್ಬ ಮಹಿಳೆ ಸೌಂದರ್ಯ ಸ್ಪರ್ಧೆ ಗಳಲ್ಲಿ ಭಾಗವಹಿಸಿದ ದಾಖಲೆ ಇಲ್ಲ.

73 ನೇ ವಿಶ್ವ ಸುಂದರಿ ಸ್ಪರ್ಧೆಯು ಸೆಪ್ಟೆಂಬರ್ 28 ರಂದು ಮೆಕ್ಸಿಕೋದಲ್ಲಿ ನಡೆಯಲಿದೆ. ಸೌದಿ ಅರೇಬಿಯಾ ಮೊದಲ ಬಾರಿಗೆ ಇದರಲ್ಲಿ ಭಾಗವಹಿಸುತ್ತಿದೆ. ಈ ದೇಶವನ್ನು ರೂಪದರ್ಶಿ ರೂಮಿ ಅಲ್ಕಾಹ್ತಾನಿ (27) ಪ್ರತಿನಿಧಿಸಿದ್ದಾರೆ. ವಿಶ್ವ ಸುಂದರಿ ಸ್ಪರ್ಧೆ ಯಲ್ಲಿ ತನ್ನ ದೇಶವನ್ನು ಪ್ರತಿನಿಧಿಸುವುದಾಗಿ ಸೌದಿ ಅರೇಬಿಯಾ ಘೋಷಿಸಿದೆ. ರೂಮಿ ಅಲ್ಕಾಹ್ತಾನಿ ಕೂಡ ತಮ್ಮ ಮನಮೋಹಕ ಫೋಟೋಗಳನ್ನು ಹಂಚಿಕೊಂಡಿ ದ್ದಾರೆ. ಈ ಫೋಟೋಗಳಲ್ಲಿ, ರೂಮಿ ಸ್ಟ್ರಾಪ್‌ಲೆಸ್ ಸೀಕ್ವಿನ್ಡ್ ಫ್ರಾಕ್ ಅನ್ನು ಧರಿಸಿದ್ದಾರೆ.

‘ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಭಾಗವಹಿಸಲು ನನಗೆ ಗೌರವವಿದೆ. ಸೌದಿ ಅರೇಬಿಯಾ ಮೊದಲ ಬಾರಿಗೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ’ ಎಂದು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅರೇಬಿಕ್ ಭಾಷೆಯಲ್ಲಿ ಬರೆದಿದ್ದಾರೆ. ಇದರೊಂದಿಗೆ ರೂಮಿ ಅಲ್ ಕಹ್ತಾನಿ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮೊದಲ ಸೌದಿ ಯುವತಿ ಎಂಬ ಇತಿಹಾಸ ಸೃಷ್ಟಿಸ ಲಿದ್ದಾರೆ.

ರಿಯಾದ್ ನಲ್ಲಿ ಹುಟ್ಟಿ ಬೆಳೆದ ರೂಮಿ ಅಧಿಕೃತವಾಗಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಕೆಲವು ವಾರಗಳ ಹಿಂದೆ ಮಲೇಷ್ಯಾ ದಲ್ಲಿ ನಡೆದ ಮಿಸ್ ಅಂಡ್ ಮಿಸೆಸ್ ಗ್ಲೋಬಲ್ ಏಷ್ಯನ್ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು. ಸ್ಥಳೀಯ ಸೌಂದರ್ಯ ಸ್ಪರ್ಧೆಯಲ್ಲಿ ರೂಮಿ ಮಿಸ್ ಸೌದಿ ಅರೇಬಿಯಾ ಕಿರೀಟವನ್ನು ಪಡೆದರು. ಅವರು ಮಿಸ್ ಅರಬ್ ವರ್ಲ್ಡ್ ಪೀಸ್ 2021 ಮತ್ತು ಮಿಸ್ ವುಮೆನ್ ಸೌದಿ ಅರೇಬಿಯಾ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Leave a Comment

Advertisements

Recent Post

Live Cricket Update