Advertisements

ಲೋಕಸಭಾ ಚುನಾವಣೆ: ಅಸಾದುದ್ದೀನ್ ಓವೈಸಿ ಮಣಿಸಲು ಸಾನಿಯಾ ಕಣಕ್ಕೆ…!

ಹೈದರಾಬಾದ್: ಐಎಂಐಎಂ (AIMIM) ನಾಯಕ ಅಸಾದುದ್ದೀನ್ ಓವೈಸಿ (Asaduddin Owaisi) ಸ್ಪರ್ಧಿಸುವ ಕ್ಷೇತ್ರ ಭಾರೀ ರಂಗು ಪಡೆಯುವ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆಯಲ್ಲಿ ಹಿರಿಯ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರನ್ನು ಮಣಿಸಲು ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಪ್ರಯತ್ನ ಪಡುತ್ತಿವೆ. ಓವೈಸಿಯನ್ನು ಸೋಲಿಸಲು ದೇಶದ ಹಿರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಕಣಕ್ಕಿಳಿಸಿ ಹೈದರಾಬಾದ್‌ನಲ್ಲಿ ನೇರಾನೇರಾ ಫೈಟ್‌ಗೆ ದಾರಿ ಮಾಡಿಕೊಡಲು ರಾಜಕೀಯ ಪಕ್ಷ ಪ್ಲಾನ್ ಮಾಡಿದೆ.

ಟೆನಿಸ್ ಸೆನ್ಸೇಷನ್ ಸಾನಿಯಾ ಮಿರ್ಜಾ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಸಾದು ದ್ದೀನ್ ಓವೈಸಿಗೆ ನೇರ ಸ್ಪರ್ಧೆ ನೀಡುವ ಸಾಧ್ಯತೆ ಇದ್ದು, ಮೂಲಗಳ ಪ್ರಕಾರ ಕಾಂಗ್ರೆಸ್ ಪಕ್ಷವು ಸಾನಿಯಾ ಮಿರ್ಜಾ ಅವರ ಜನಪ್ರಿಯತೆಯ ಲಾಭ ಪಡೆಯಲು ಬಯಸಿದೆ. ಸಾನಿಯಾ ಮಿರ್ಜಾ ಅವರನ್ನು ಹೈದರಾಬಾದ್‌ನಿಂದ ಅಸಾದುದ್ದೀನ್ ಓವೈಸಿ ವಿರುದ್ಧ ಕಣಕ್ಕಿಳಿಸಲು ಪ್ಲಾನ್ ಮಾಡಿದ್ದು, ಇದಕ್ಕಾಗಿ ಸಾನಿಯಾ ಮಿರ್ಜಾ ಅವರನ್ನು ಒಪ್ಪಿಸಲು ಕಾಂಗ್ರೆಸ್‌ ನಾಯಕರು ಮನೆ ಬಾಗಿಲ ಕದ ತಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಸಾದುದ್ದೀನ್ ಓವೈಸಿ ಕಳೆದ ನಾಲ್ಕು ಚುನಾವಣೆಗಳಲ್ಲಿ ನಿರಂತರವಾಗಿ ಗೆಲುವು ಸಾಧಿಸುತ್ತಿರುವ ಕಾರಣ ಹೈದರಾಬಾದ್‌ನಿಂದ ಸ್ಪರ್ಧೆ ಕುತೂಹಲ ಮೂಡಿಸಲಿದೆ.

ಇತ್ತೀಚೆಗಷ್ಟೇ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ಇದರಲ್ಲಿ ಲೋಕಸಭೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಸಭೆಯಲ್ಲಿ ಮೊಹಮ್ಮದ್ ಅಜರುದ್ದೀನ್ ಅವರು ಹೈದರಾಬಾದ್‌ ನಿಂದ ಸಾನಿಯಾ ಮಿರ್ಜಾಗೆ ಟಿಕೆಟ್ ನೀಡಲು ಮುಂದಾಗಿದ್ದರು. ಮೊಹಮ್ಮದ್ ಅಜರುದ್ದೀನ್ ಅವರು ಸಾನಿಯಾ ಮಿರ್ಜಾ ಅವರೊಂದಿಗೆ ಕೌಟುಂಬಿಕ ಸಂಬಂಧ ಹೊಂದಿದ್ದಾರೆ. ಅಜರುದ್ದೀನ್ ಅವರ ಪುತ್ರ ಅಸಾದುದ್ದೀನ್ ಅವರು ಸಾನಿಯಾ ಮಿರ್ಜಾ ಅವರ ತಂಗಿ ಅನಮ್ ಮಿರ್ಜಾ ಅವರನ್ನು ವಿವಾಹವಾಗಿದ್ದಾರೆ.

ಹೈದರಾಬಾದ್‌ನ ಲೋಕಸಭಾ ಸ್ಥಾನವು ಅನೇಕ ವರ್ಷಗಳಿಂದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂ ಐಎಂ) ನ ಭದ್ರಕೋಟೆಯಾಗಿದೆ.

ಸಾನಿಯಾ ಮಿರ್ಜಾ ಅವರು ಭಾರತ್ ರಾಷ್ಟ್ರ ಸಮಿತಿ ಅಡಿಯಲ್ಲಿ ಹೈದರಾಬಾದ್ ನಗರದ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.

ಸಾನಿಯಾ ಮಿರ್ಜಾ ಹೆಸರು ಕೇಳಿ ಬಂದ ಮೇಲೆ ನಗರದ ಜನರಲ್ಲಿ ಕುತೂಹಲ ಮೂಡಿದೆ. ನಿಸ್ಸಂಶಯವಾಗಿ, ಅವರು ಸಾಕಷ್ಟು ಜನಪ್ರಿಯ ರಾಗಿದ್ದಾರೆ. ಆದರೆ ಅವರು ರಾಜಕೀಯ ಕ್ಷೇತ್ರಕ್ಕೆ ಬಂದರೆ ಅದು ಅವರಿಗೆ ಹೊಸದು ಮತ್ತು ಅವರು ಅನುಭವಿಯೊಬ್ಬರನ್ನು ಎದುರಿಸಲಿದ್ದಾರೆ. ಆದ್ದರಿಂದ ಇದು ಸಾಕಷ್ಟು ಸವಾಲಾಗಬಹುದು.

Leave a Comment

Advertisements

Recent Post

Live Cricket Update