Advertisements

ಶಾಸಕ, ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿ ಸಾವಿನ ತನಿಖೆಗೆ ವಿಪಕ್ಷ ಒತ್ತಾಯ

ಕ್ನೋ: ಉತ್ತರಪ್ರದೇಶದ 5 ಬಾರಿಯ ಶಾಸಕ, ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿ (60) ಸಾವಿನ ಕುರಿತು ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ಅನುಮಾನ ವ್ಯಕ್ತ ಪಡಿಸಿದ್ದು, ಸೂಕ್ತ ತನಿಖೆ ನಡೆಯಬೇಕೆಂದು ಒತ್ತಾಯಿಸಿವೆ.

8 ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾಗಿ 2005 ರಿಂದಲೂ ಜೈಲಲ್ಲಿದ್ದ ಅನ್ಸಾರಿ, ಗುರುವಾರ ಸಂಜೆ ರಂಜಾನ್‌ ಉಪವಾಸ ಮುರಿಯು ತ್ತಿದ್ದಂತೆ ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಹೃದಯಾಘಾತದಿಂದ ಕೊನೆಯುಸಿರೆಳೆದರು. ಮಂಗಳವಾರವಷ್ಟೇ ಕಿಬ್ಬೊಟ್ಟೆ ನೋವಿನ ಕಾರಣ 14 ಗಂಟೆ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದರು.

ಅನ್ಸಾರಿ ಸಾವಿನ ಹಿನ್ನೆಲೆ ಉ.ಪ್ರದೇಶದಾದ್ಯಂತ ನಿಷೇಧಾಜ್ಞೆ ಹೊರಡಿಸಲಾಗಿದ್ದು, ಅಲರ್ಟ್‌ ಘೋಷಿಸಿ, ಭದ್ರತೆ ಬಿಗಿಗೊಳಿಸಲಾಗಿದೆ. ಇತ್ತ ಪ್ರತಿಪಕ್ಷಗಳು ಯೋಗಿ ಆದಿತ್ಯನಾಥ್‌ ಸರ್ಕಾರದ ಮೇಲೆ ಅನುಮಾನ ವ್ಯಕ್ತಪಡಿಸಿವೆ. ಆತನ ಸಾವಿನ ಕುರಿತು ದೊಡ್ಡ ಮಟ್ಟದಲ್ಲಿ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿವೆ.

ಇನ್ನು ಮುಖ್ತಾರ್ ಅನ್ಸಾರಿ ಸಾವಿನ ಹಿಂದೆ ಸಂಚು ಅಡಗಿದೆ. ಜೈಲಲ್ಲಿ ಯಾರೋ ವಿಷವುಣಿಸಿ ಕೊಂದಿದ್ದಾರೆ ಎಂದು ಅವರ ಸಹೋದರ, ಘಾಜಿಪುರ ಸಂಸದ ಅಫ್ಜಲ್‌ ಅನ್ಸಾರಿ ಆರೋಪಿಸಿದ್ದಾರೆ. ಅನ್ಸಾರಿಯನ್ನು ಎನ್‌ ಕೌಂಟರ್‌ ಮಾಡಲು ಸಂಚು ನಡೆದಿದೆ ಎಂದು ಈ ಹಿಂದೆಯೇ ಅವರ ಕುಟುಂಬಸ್ಥರು ಆರೋಪಿಸಿದ್ದರು.

Leave a Comment

Advertisements

Recent Post

Live Cricket Update