Advertisements

ಇಂದು, ನಾಳೆ LICಯ ಕಚೇರಿಗಳು ಓಪನ್‌

ವದೆಹಲಿ: ಜೀವ ವಿಮಾ ನಿಗಮ (LIC) ಮಾ.30 ಮತ್ತು ಮಾ. 31ರಂದು ತನ್ನ ಕಚೇರಿಗಳನ್ನ ತೆರೆದಿಡಲಿದ್ದು, ಹಣಕಾಸು ವರ್ಷ ಮುಗಿಯುವ ಮೊದಲು ತೆರಿಗೆ ಉಳಿತಾಯ ಕಾರ್ಯ ಪೂರ್ಣಗೊಳಿಸಲು ತೆರಿಗೆದಾರರಿಗೆ ಅನುಕೂಲವಾಗಲಿದೆ.

ಶನಿವಾರ ಮತ್ತು ಭಾನುವಾರ ತಮ್ಮ ಶಾಖೆಗಳು ತೆರೆದಿರುತ್ತವೆ ಎಂದು ಬ್ಯಾಂಕುಗಳು ಘೋಷಿಸಿದ ನಂತರ ಎಲ್‌ಐಸಿ ಈ ಕ್ರಮ ಕೈಗೊಂಡಿದೆ.

ಭಾರತದಲ್ಲಿ ಬ್ಯಾಂಕುಗಳಿಗೆ ಪ್ರತಿ ಭಾನುವಾರ ರಜೆ ಇರುತ್ತದೆ. ಇದಲ್ಲದೆ, ತಿಂಗಳ ಎರಡು ಶನಿವಾರಗಳಂದು ಬ್ಯಾಂಕುಗಳು ಸಹ ಮುಚ್ಚಲ್ಪಡು ತ್ತವೆ. ಆದಾಗ್ಯೂ, ಈ ವಾರ ಶನಿವಾರ ಮತ್ತು ಭಾನುವಾರ ಎರಡೂ ದಿನಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.

ಇದಕ್ಕಾಗಿ ರಿಸರ್ವ್ ಬ್ಯಾಂಕ್ ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ಮಾರ್ಚ್ 20, 2024 ರಂದು ರಿಸರ್ವ್ ಬ್ಯಾಂಕ್ ಹೊರಡಿಸಿದ ಅಧಿಸೂಚನೆ ಯಲ್ಲಿ ಎಲ್ಲಾ ಏಜೆನ್ಸಿ ಬ್ಯಾಂಕುಗಳ ಎಲ್ಲಾ ಶಾಖೆಗಳು ಮಾ.30 ಮತ್ತು ಮಾ.31 ತೆರೆದಿರುತ್ತವೆ ಎಂದು ತಿಳಿಸಲಾಗಿದೆ.

ಆರ್ ಬಿಐನ ಈ ಅಧಿಸೂಚನೆಯನ್ನು ಜಾರಿಗೆ ತರುತ್ತಿರುವ ಬ್ಯಾಂಕುಗಳ ಶಾಖೆಗಳು ಈ ವಾರ ಶನಿವಾರ ಮತ್ತು ಭಾನುವಾರ ತೆರೆದಿರುತ್ತವೆ. ಬ್ಯಾಂಕುಗಳ ಉದ್ಯೋಗಿಗಳಿಗೆ ಈ ವಾರಾಂತ್ಯದಲ್ಲಿ ರಜೆ ಸಿಗುವುದಿಲ್ಲ.

Leave a Comment

Advertisements

Recent Post

Live Cricket Update