Advertisements

ಸಾರ್ಥಕ ಸಾಧಕ, ಬಹುಮು ಪ್ರತಿಭೆ ಸಂಗಮೇಶ್ ಉಪಾಸೆ

ವಿನಾಯಕರಾಮ್ ಕಲಗಾರು

ತಮ್ಮದೇ ಆದ ವಿಶೇಷ, ವಿಭಿನ್ನ, ವಿಚಿತ್ರ, ವಿನೂತನ, ವಿದೂಶಕ ಮ್ಯಾನರಿಸಂ ಮೂಲಕ ಇಡೀ ಕನ್ನಡಿಗರ ಮನ ಗೆದ್ದ ಸಂಗಮೇಶ್ ಸಕ್ಸಸ್ ಹಾದಿಯ ಹಿಂದೆ ದೊಡ್ಡ ಮಟ್ಟದ ಶ್ರಮವೇ ಇದೆ. ಹಾರ್ಡ್ ವರ್ಕ್ ಅನ್ನೋ ಗೆಲುವಿನ ಸೂತ್ರ ಅವರನ್ನು ಎತ್ತಿ ಹಿಡಿದಿದೆ. ಹಿಡಿದು ನಿಲ್ಲಿಸಿದೆ. ನಿಲ್ಲಿಸಿ ಗೆಲ್ಲಿಸಿದೆ! ಮನೋರಂಜನಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿರುವ ಸಂಗಮೇಶ್ ಅವರನ್ನು ಗುರುತಿಸಿರುವ ವಿಶ್ವವಾಣಿ ಪತ್ರಿಕೆ, ವಿಶ್ವಮಟ್ಟದ ಪ್ರತಿಷ್ಟಿತ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿಗೆ ಆಯ್ಕೆ
ಮಾಡಿದೆ.

‘ಅರ್ಥವಾಯಿತು ಬಿಡಿ..!’
ಕಣುಮಿಟುಕಿಸುತ ಆ ಡೈಲಾಗ್ ಹೇಳುತ್ತಿದ್ದರೆ ಜನ ಸಂಭ್ರಮದಿಂದ ಟಿವಿ ಮುಂದೆ ಬಂದು ಕೂರೋರು, ಅವರ ಅಭಿನಯ ಕಲೆಗೆ ಶಹಬ್ಬಾಶ್ ಎನ್ನೋರು. ಚಪ್ಪಾಳೆ ಹೊಡೆಯುತ ಅವರ ಡೈಲಾಗ್ ಡಿಲೆವರಿಯನ್ನು ಸವಿಯೋರು. ಸಿಲ್ಲಿಲಲ್ಲಿ ಧಾರಾವಾಹಿಯ ಆ
ಕಾಂಪೌಂಡರ್ ಪಾತ್ರವನ್ನು ಜನ ಇವತ್ತಿಗೂ ಮರೆತಿಲ್ಲ. ಮರೆಯುವುದಕ್ಕೂ ಸಾಧ್ಯವಿಲ್ಲ! ಸಿಲ್ಲಿಲಲ್ಲಿ ಧಾರಾವಾಹಿಯಲ್ಲಿ ಡಾಕ್ಟರ್ ವಿಠಲ್ ರಾವ್ ಪಾತ್ರಕ್ಕೆ ಎಷ್ಟು ಜನಪ್ರಿಯತೆ ಇತ್ತೋ, ಅಷ್ಟೇ -ಮಸ್ ಆದ ಆ ಕಾಂಪೌಂಡರ್ ಗೋವಿಂದನ ಪಾತ್ರ ಮಾಡಿದ್ದು, ಮಾಡಿ ಗೆದ್ದಿದ್ದು ಧಾರವಾಡ ಮೂಲದ ಸಂಗಮೇಶ ಉಪಾಸೆ…

ಉಪಾಸೆ ಉಚ್ಛರಣೆ ಹಾಗಿತ್ತು. ಅಲ್ಲಿ ನಗುವಿನ ಚಿಲುಮೆ ಏಳುತ್ತಿತ್ತು. ಸರ್ಕಾರಿ ನೌಕರಿಯ ಜತೆ ಜತೆಗೆ ಮನರಂಜನಾ ಕ್ಷೇತ್ರದಲ್ಲೂ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿರುವ ಉತ್ಸಾಹಿ ವ್ಯಕ್ತಿತ್ವ ಸಂಗಮೇಶ್ ಅವರದ್ದು. ಜನಸೇವೆಗೆ ಸದಾ ಮುಂದಾಗುವ ಸಂಗಮೇಶ್, ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಸಿನೆಮಾ ರಂಗದಲ್ಲೂ ಹೆಸರು ಮಾಡಿದ್ದಾರೆ. ಇವೆಲ್ಲದರ ಜತೆಗೆ
ಸಂಗಮೇಶ್ ಒಬ್ಬ ಸುಶ್ರಾವ್ಯ ಹಾಡುಗಾರರೂ ಹೌದು, ಮೋಡಿಗಾರರೂ ಹೌದು!

ವಿಜಯಪುರ ಇಂಡಿ ತಾಲೂಕಿನ ಅಂಜುಟಗಿಯಲ್ಲಿ ಜನಿಸಿದ ಸಂಗಮೇಶ್ ಬಹುದೊಡ್ಡ ಸಂಘಜೀವಿ. ಬಡತನದಿಂದಲೇ ಬೆಳೆದುಬಂದ ಅವರು, ಧಾರವಾಡದಲ್ಲಿ ಬಿಎ, ಬೆಂಗಳೂರಿನಲ್ಲಿ ಎಂಎ ಮುಗಿಸಿ, ೨೦೦೬ರಲ್ಲಿ ಕೆಎಎಸ್ ಪಾಸ್ ಮಾಡುತ್ತಾರೆ. ನಂತರ ಸರಕಾರಿ ನೌಕರಿಗೆ ಆಯ್ಕೆಯಾಗಿ ಸಾಕಷ್ಟು ಆಯಾಮಗಳಲ್ಲಿ ಜನಸೇವೆ ಮಾಡುತ್ತಾ ಬರುತ್ತಾರೆ. ಈಗಲೂ ಸಹ ಪ್ರಾಮಾಣಿಕ ಅಧಿಕಾರಿಯಾಗಿ ಜನಮನ ಗೆದ್ದಿದ್ದಾರೆ. ಜನಸೇವೆ ಮುಂದುವರೆಸಿದ್ದಾರೆ!

ರಂಗದಲ್ಲಿನ ವಿಶೇಷ ಅನುಭವ
ಇನ್ನು ಕಲಾಸೇವೆಯ ವಿಷಯಕ್ಕೆ ಬಂದರೆ, ಧಾರವಾಡದ ಸಮಗ್ರ ರಂಗ ಶಿಕ್ಷಣ ಶಿಬಿರ, ಸಾಹಿತ್ಯ ಅಧ್ಯಯನ ಕಮ್ಮಟ, ವಚನ ಅಧ್ಯಯನ ಶಿಬಿರ, ರೇಡಿಯೋ ನಾಟಕ ಶಿಬಿರಗಳಲ್ಲಿ ಭಾಗವಹಿಸಿ ಪೂರ್ಣಪ್ರಮಾಣದ ತರಬೇತಿ ಪಡೆದಿದ್ದಾರೆ. ಅಭಿನಯ ಭಾರತಿ, ಚಿನ್ನರ ಲೋಕ, ಬಾಲಭವನ ಸಮಿತಿ, ದೇವದಾಸಿ ನಿರ್ಮೂಲನ ಶಿಬಿರ, ಐಶ್ವರ್ಯ ಕಲಾನಿಕೇತನ, ಮಕ್ಕಳ ರಂಗಶಿಬಿರದಲ್ಲಿ
ಸೇರಿದಂತೇ ಸಾಕಷ್ಟು ರಂಗದಲ್ಲಿ ತೊಡಗಿಸಿಕೊಂಡು ವಿಶೇಷ ಅನುಭವ ಪಡೆದಿದ್ದಾರೆ.

ನಾಲ್ಕು ವರುಷಗಳ ಕಾಲ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿರುವ ಸಂಗಮೇಶ್, ಬೆಳಕಿನೆಡೆಗೆ, ಬಲಸು ಬರಹ ಬುತ್ತಿ, ಸಾಧನ ಯೋಗಿ ಶ್ರಮಗಾನ, ಗಾಂದಿ ಮೆಟ್ಟು ಬೇಕು, ರಂಗಬಹಿರಂಗ, ಬೆಂಕಿ, ಸಾವಿನ ಸನ್ನಿಧಿಯಲ್ಲಿ, ವೈಕುಂಠ ಯಾತ್ರೆ, ದೇವರುಗಳಿವೆ ಎಚ್ಚರಿಕೆ ಸೇರಿದಂತೇ ಸಾಕಷ್ಟು ಕಾವ್ಯ, ನಾಟಕ, ಅಂಕಣಬರಹ ಗಳನ್ನೂ ಬರೆದು ದೊಡ್ಡ ಮಟ್ಟದಲ್ಲಿ ಪ್ರಶಸ್ತಿಗಳನ್ನು ತಮ್ಮದಾ ಗಿಸಿಕೊಂಡಿದ್ದಾರೆ!

ಆಗಿನ ಕಾಲದಲ್ಲಿ ಭಾವಗೀತೆಗಳ ಸಿಡಿ ಎಂದರೆ ಎಲ್ಲಿಲ್ಲದ ಕ್ರೇಜ್. ಆ ಭಾಗದಲ್ಲೂ ಸಂಗಮೇಶ್ ಹೆಸರು ರಿಜಿಸ್ಟರ್ ಆಗಿದೆ. ಧ್ವನಿ ಸಾಂದ್ರಿಕೆಗಳಾದ ನನ್ನವಳಿಗಾಗಿ, ನಾದರಂಜಿನಿ ಇವತ್ತಿಗೂ ಜನರ ಮನದಲ್ಲಿ ಗುನುಗುತ್ತಿದೆ. ರೇಡಿಯೋ ನಾಟಕಗಳಾದ ಹಿಡಿ ಬ್ಯಾಡ್ರಪ್ಪೊ ತಪ್ಪುದಾರಿ, ದ್ಯಾಮಾ-ಕೆಂಚಿ, ಖಾಸಗೀಕರಣ, ನೂಲು ನೋವು ಎಳೆ ಎಳೆ ಸೇರಿದಂತೆ, ಅಪ್ಪ, ಖಾಸಗೀಕರಣ, ರಾಕ್ಷಸ, ಮುದುಕನ ಮದುವೆ, ಅಳಿಯ ದೇವರು, ದೇವದಾಸಿ, ಭಕ್ತ ಅಂಬರೀಶ, ಶ್ರೀ ಕೃಷ್ಣ ಸಂಧಾನ ಮೊದಲಾದ ನಾಟಕಗಳಲ್ಲಿ ನಟನೆಯನ್ನೂ ಮಾಡಿದ್ದಾರೆ!

ಕಿರುತೆರೆಯಲ್ಲಿ ಬಹುದೊಡ್ಡ ಸಾಧನೆ
ಚಾಣಕ್ಯ, ಅಳಿಯ ದೇವರು, ಖಾಸಗೀಕರಣ ನಾಟಕ ಗಳಿಗೆ ಸಂಗಮೇಶ್ ಅವರ ಸಮರ್ಥ ನಿರ್ದೇಶನವೂ ಇದೆ. ಸಹ ನಿರ್ದೇಶಕ ರಾಗಿ ಮನೆತನ, ಭೋಜಕಾಳಿದಾಸ, ಪರಮಾನಂದ ಶಿಷ್ಯರು, ನುಡಿಸಿ ಹಾಡೋಣ ಬನ್ನಿ, ವೇದಿಕೆ, ಪಿಸುಮಾತು ಧಾರಾವಾಗಳಿಗೆ ಕೆಲಸ ಮಾಡಿದ್ದಾರೆ. ಮಿಂಚಿನ ಬಳ್ಳಿ, ವಠಾರ, ಮನೆಮನೆಮಾತು ಮೊದಲಾದ ಧಾರಾವಾಹಿಗಳಿಗೆ ಅಕ್ಷರ ಜೋಡಣೆ ಸಹ ಮಾಡಿ ದ್ದಾರೆ. ಕತೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನದ ಕೆಲಸದಲ್ಲೂ ಅವರು ಛಾಪು ಮೂಡಿಸಿದ್ದಾರೆ. ಸಂಕ್ರಾಂತಿ, ಭಾಗ್ಯ, ಪಾಪಾ ಪಾಂಡು, ಕಾವ್ಯಾಂಜಲಿ, ಮನೆಮನೆ ಕಥೆ, ಬಣ್ಣ, ಮಿಂಚಿನ ಬಳ್ಳಿ ಸೇರಿದಂತೇ ಸಾಕಷ್ಟು ಸೀರಿಯಲ್ ಗಳಲ್ಲಿ ನಟಿಸಿ ಗೆದ್ದರು. ಸಿಲ್ಲಿಲಲ್ಲಿಯ ಕಾಂಪೌಂಡರ್ ಪಾತ್ರವಂತೂ ಆ ಕಾಲದಲ್ಲೂ, ಈ ಕಾಲದಲ್ಲೂ ನೆನಪಲ್ಲಿ ಇರುವ ಪಾತ್ರವೇ ಸರಿ!

ಸಿನಿಮಾ ಕ್ಷೇತ್ರಕ್ಕೂ ಸೈ
ವೀರಕನ್ನಡಿಗ, ಶುಭಸಖಿ, ಪ್ರಿಯತಮ, ಸಖ-ಸಖಿ, ಸೈಲೆನ್ಸ್, ತ್ಯಾಗು, ನಿನ್ನುಸಿರೇ ನನ್ನುಸಿರು, ಹ್ಯಾಪಿ ನ್ಯೂ ಇಯರ್, ಮಂದಾಕಿಣಿ, ಹೌಸ್ ಫುಲ್, ಲವಕುಶ, ಭಯ ಡಾಟ್ ಕಾಮ್, ಜಿಂದಗಿ, ಮಣ್ಣಿನ ಮಡಿಲು, ಒಲವೇ ವಿಸ್ಮಯ, ಲಿಫ್ಟ್ ಕೊಡ್ಲಾ? ಕಳ್ ಮಂಜ, ಬಾಡಿಗಾರ್ಡ್, ಗಾಡ್ ಫಾದರ್ ಸೇರಿದಂತೇ ಇಪತ್ತಕ್ಕೂ ಹೆಚ್ಚು ಸಿನೆಮಾ ಗಳಲ್ಲಿ ನಟಿಸಿ, ರಂಜಾನ್ ಎನ್ನೋ ಅಪರೂಪದ ಚಿತ್ರ
ವನ್ನು ಕನ್ನಡಿಗರಿಗೆ ಕೊಟ್ಟ ಕೀರ್ತಿ ಸಂಗಮೇಶ್ ಅವರದ್ದು, ಪತ್ರಿಕೆಗಳಲ್ಲೂ ಕೆಲಸ ಮಾಡಿರುವ ಸಂಗಮೇಶ್, ಈ ಸಂಜೆ, ಸಿನಿಮಿನಿ ಸ್ಟ್ರೀನ್, ಅರಗಿಣಿ ಸೇರಿದಂತೆ ಸಾಕಷ್ಟು ಪತ್ರಿಕೆಗಳಿಗೆ ಸೇವೆ ಸಲ್ಲಿಸಿದ್ದಾರೆ. ಸಾಕಷ್ಟು ನಾಟಕ ಗಳ ವಿಮರ್ಶಕರಾಗಿಯೂ ಗಮನ ಸೆಳೆದಿದ್ದಾರೆ.

ಕಲಾ ವಂತಿಕೆಯ ವಿಷಯಕ್ಕೆ ಬಂದರೆ ಕೆಲವರು ಒಂದು ಆಯಾಮಕ್ಕೆ ಹೊಂದಿಕೊಂಡು ಅದೇ ಹಾದಿಯಲ್ಲಿ ನಡೆದುಕೊಂಡು ಸಾಗುತ್ತಾರೆ. ಸಂಗಮೇಶ್ ಹಾಗಲ್ಲ. ನಾಟಕ, ಕಾವ್ಯ, ಕಿರುತೆರೆ, ನಟನೆ, ನಿರ್ದೇಶನ, ನಿರೂಪಣೆ, ಬರವಣಿಗೆ, ಪತ್ರಿಕೋದ್ಯಮ, ಸಿನೆಮಾ ಸೇರಿ ದಂತೇ ಹಲವು ಮಜಲುಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಜತೆಗೆ ಸರ್ಕಾರಿ ನೌಕರಿಯಲ್ಲಿ ಪ್ರಾಮಾ
ಣಿಕ ಸೇವೆ ಸಲ್ಲಿಸಿ ಅಲ್ಲಿಯೂ ಸೈ ಎನಿಸಿಕೊಂಡಿದ್ದಾರೆ!

ಸಾಲು ಸಾಲು ಪ್ರಶಸ್ತಿ ಗೌರವಗಳು!
ಸಂಗಮೇಶ್ ಅವರ ಕಾರ್ಯಶ್ರದ್ಧೆಗೆ ತಕ್ಕುದಾಗಿ ಸಾಕಷ್ಟು ಪ್ರಶಸ್ತಿ ಗೌರವಗಳು ಸಂದಾಯವಾಗಿವೆ. ದೇವರುಗಳಿವೆ ಎಚ್ಚರಿಕೆ, ನಾಟಕಕ್ಕೆ ನಂಚಪ್ಪ ಚಿರಂತನ ಪ್ರಶಸ್ತಿ, ವೈಕುಂಠ ಯಾತ್ರೆ ನಾಟಕಕ್ಕೆ ಕನ್ನಡ ಸಾಹಿತ್ಯ ಪ್ರಶಸ್ತಿ ದತ್ತಿ ಪ್ರಶಸ್ತಿ, ಸಂಕ್ರಮಣ ಕಾವ್ಯ ಪ್ರಶಸ್ತಿ, ದೇವರ ದಾಸಿಮಯ್ಯ ಪ್ರಶಸ್ತಿ, ಚಿಎಚ್ ರೇವಡಿಗಾರ್ ರಾಜ್ಯ ಪ್ರಶಸ್ತಿ, ಕನ್ನಡ ಕಲಾ ಶ್ರೇಷ್ಠ ಪ್ರಶಸ್ತಿ, ವಿಶ್ವ ಕಲಾರತ್ನ ಪ್ರಶಸ್ತಿ, ವಿಶ್ವಮಾನವ ಕುವೆಂಪು ರತ್ನ ಪ್ರಶಸ್ತಿ, ಸಾಂಸ್ಕೃತಿಕ ಕಲಾ ರತ್ನ, ಹೀಗೆ ಸಂಗಮೇಶ್ ಸಾಧನೆಯ ಶಿಖರಕ್ಕೆ ಸಂದ ಗೌರವಾದರಗಳು ಹತ್ತು ಹಲವು!

ಸಂಗಮೇಶ್ ಉಪಾಸೆ ಮಾತಿನ ಶೈಲಿಯೇ ಜನಮೆಚ್ಚುವಂಥದ್ದು, ಜಗ ಒಪ್ಪುವಂಥದ್ದು. ಅದರಲ್ಲೂ ಉತ್ತರ ಕರ್ನಾಟಕ ಭಾಷೆ ಯನ್ನು ಉಪಾಸೆ ಅನುಭವಿಸಿ ಮಾತನಾಡುತ್ತಾರೆ. ಖಡಕ್ ರೊಟ್ಟಿ ತಿಂದಷ್ಟೇ ಖುಷಿ ಕೊಡುವ ಅವರ ಜವಾರಿ ಭಾಷೆ ಕೇಳುತ್ತಿದ್ದರೆ ಕೇಳುತ್ತಲೇ ಇರಬೇಕು ಎನಿಸುತ್ತದೆ. ಅಭಿನಯವನ್ನು ನೋಡುತ್ತಿದ್ದರೆ ನೋಡುತ್ತಲೇ ಇರಬೇಕು ಎನಿಸುತ್ತದೆ! ಇವೆಲ್ಲಕ್ಕೂ ಕಾರಣ ಸಂಗಮೇಶ್ ಉಪಾಸೆ ಅವರಿಗೆ ಭಾಷೆಯ ಮೇಲೆ ಇರುವ ಹಿಡಿತ. ಬರವಣಿಗೆಯ ಮೇಲೆ ಇರುವ ಸೆಳೆತ. ಓದುವಿಕೆ ಮೇಲೆ ಇರುವ ತುಡಿತ.

ಈ ಬಾರಿಯ ವಿಶ್ವಮಟ್ಟದ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಸಂಗಮೇಶ್ ಅವರ ಮುಡಿಗೇರಿದೆ. ಇಂಡೋ ನೇಶಿಯಾದ ಬಾಲಿಯಲ್ಲಿ ನಡೆಯಲಿರುವ ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಂಗಮೇಶ್ ಭಾಗವಹಿಸಲಿದ್ದಾರೆ. ಕರ್ನಾಟಕದ ಟಾಪ್ ಬ್ರ್ಯಾಂಡ್ ವಿಶ್ವೇಶ್ವರ ಭಟ್ ಸಾರಥ್ಯದ ಈ ಪ್ರಶಸ್ತಿ ಪಡೆಯುತ್ತಿರುವುದು ನಮ್ಮ ಭಾಗ್ಯ. ಇನ್ನಷ್ಟು ಸಾಧನೆಗಳಿಗೆ ಈ ಗೌರವ ನನಗೆ ಸೂರ್ತಿ ಎಂದು ಹೆಮ್ಮೆಯ ಮಾತುಗಳನ್ನಾಡುತ್ತಾರೆ ಸಂಗಮೇಶ್ ಉಪಾಸೆ !

*

ಕಲೆ ಅಷ್ಟು ಸುಲಭಕ್ಕೆ ಒಲಿಯುವುದಿಲ್ಲ. ಕಷ್ಟಪಟ್ಟು, ಇಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದೇನೆ. ಕಲಾಸೇವೆಯ ಜೊತೆ ಕೈಲಾದ
ಮಟ್ಟಿಗೆ ಜನಸೇವೆ ಮಾಡಬೇಕು, ಬಡ ಜನಗಳ ಪರ ಕೆಲಸ ಮಾಡಬೇಕು ಎನ್ನುವುದಷ್ಟೇ ನನ್ನ ವೃತ್ತಿ ಜೀವನದ ದಿವ್ಯೋದ್ದೇಶ.
-ಸಂಗಮೇಶ್ ಉಪಾಸೆ

Leave a Comment

Advertisements

Recent Post

Live Cricket Update