Advertisements

ನ್ಯಾಯಾಲಯದಲ್ಲೇ ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಹೈಕೋರ್ಟ್ ನ್ಯಾಯಾಲಯದಲ್ಲೇ ವ್ಯಕ್ತಿಯೊಬ್ಬ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಕೋರ್ಟ್ ಕೇಸ್ ಸಂಬಂಧ ಬೆಂಗಳೂರಿನ ಹೈಕೋರ್ಟ್ ನ್ಯಾಯಾಲಯಕ್ಕೆ ಮೈಸೂರು ಮೂಲಕ ಶ್ರೀನಿವಾಸ್ ಎಂಬುವರು ಆಗಮಿಸಿದ್ದರು.

ಹೈಕೋರ್ಟ್ ಕೋರ್ಟ್ ಹಾಲ್.1ರಲ್ಲಿ ಪ್ರಕರಣವೊಂದರ ಸಂಬಂಧ ವಿಚಾರಣೆ ಅಂತ್ಯಕ್ಕೆ ತಲುಪಿದ್ದ ಶ್ರೀನಿವಾಸ್, ನ್ಯಾಯ ಮೂರ್ತಿಗಳ ಎದುರು ಬಂದು, ಅರ್ಜಿಯೊಂದನ್ನು ನ್ಯಾಯಾಲಯಕ ಸಿಬ್ಬಂದಿಗಳಿಗೆ ನೀಡಿದರು.

ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಅರ್ಜಿಯೊಂದನ್ನು ನೀಡಿದ ಬಳಿಕ ಸಣ್ಣ ವಸ್ತುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು, ತಕ್ಷಣ ಶ್ರೀನಿವಾಸ್ ಅನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ.

ಈ ಸಂಬಂಧ ಸ್ಥಳಕ್ಕೆ ಹೈಕೋರ್ಟ್ ಕೇಂದ್ರ ವಿಭಾಗದ ಡಿಸಿಪಿ, ಕಬ್ಬನ್ ಪಾರ್ಕ್ ಇನ್ಸ್ ಪೆಕ್ಟರ್ ಭೇಟಿ ನೀಡಿ, ಪರಿಶೀಲನೆ ನಡೆಸಿ, ಮಾಹಿತಿ ಪಡೆದರು.

Leave a Comment

Advertisements

Recent Post

Live Cricket Update