ಬೆಂಗಳೂರು: ನಗರದ ಕೆ ಆರ್ ಪುರಂ ನಲ್ಲಿರುವ ಅಯ್ಯಪ್ಪ ನಗರ ಆರ್ಚ್ ಬಳಿ ಇರುವ ರಿಪೋಸ್ ಫರ್ನಿಚರ್ ಅಂಗಡಿಗೆ ಗುರುವಾರ ರಾತ್ರಿ ಅಕಸ್ಮಿಕವಾಗಿ ಬೆಂಕಿ ಬಿದ್ದಿದ್ದು ಅಂದಾಜು 16 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳಿಗೆ ಹಾನಿಯಾಗಿವೆ ಎಂದು ವರದಿಯಾಗಿದೆ.
ಅದೃಷ್ಠವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಅಂಗಡಿಯ ಎದುರಿಗೆ ಪೆಟ್ರೊಲ್ ಪಂಪ್ ಇದ್ದು, ಸ್ವಲ್ಪ ವಿಳಂಬವಾಗಿದ್ದರೂ ಹೆಚ್ಚಿನ ಅನಾಹುತ ಉಂಟಾಗುತ್ತಿತ್ತು.
ಸುಮಾರು ಮೂರು ಅಗ್ನಿಶಾಮಕದಳದ ವಾಹನಗಳು ಬಂದು ನಿರಂತರವಾಗಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿವೆ. ಬೆಂಕಿ ನಂದಿಸುವಲ್ಲಿ ಬಾಣಸವಾಡಿ, ವೈಟ್ ಫೀಲ್ಡ್ ಹಾಗೂ ಮಹದೇವಪುರಂ ನ ಅಗ್ನಿಶಾಮಕ ವಾಹನಗಳು ಕೈಜೋಡಿಸಿದವು.
ಸುಮಾರು ೩೦ ಮಂದಿ ಅಗ್ನಿಶಾಮಕ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ನಿರಂತರ ಶ್ರಮವಹಿಸಿದರು.