ವಿನಾಯಕರಾಮ್ ಕಲಗಾರು
ಮಾತುಗಾರ, ಮೋಡಿಗಾರ, ಸೊಗಸುಗಾರ ಈ ಒಳ್ಳೆ ಹುಡುಗ !
ಬಿಗ್ ಬಾಸ್ ಅನ್ನುವ ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಪರಿಚಯ ವಾದ ಮಾತಿನ ಮಲ್ಲ, ಮೋಡಿಗಾರ, ಸೊಗಸುಗಾರನ ಹೆಸರು-ಪ್ರಥಮ. ಒಳ್ಳೇ ಹುಡುಗ ಪ್ರಥಮ, ಬಿಗ್ ಬಾಸ್ ಪ್ರಥಮ, ನಟ ಭಯಂಕರ ಪ್ರಥಮ, ಹೀಗೆ ನಾನಾ ನಾಮದೇಯದ ಮೂಲಕ ಹೆಸರು ಮಾಡುವ ಪ್ರಥಮ್‌ಗೆ ಮಾತೇ ಬಂಡವಾಳ. ಮಾತೇ ಜೀವಾಳ. ಮಾತೇ ಅಂತರಾಳ. ಮಾತೇ ಮನದಾಳ. ಪ್ರಥಮ್ ಅಭಿನಯದ ನಟ ಭಯಂಕರ ಚಿತ್ರದ ಅಭಿನಯ ಮತ್ತು ಯಶಸ್ವೀ ನಿರ್ದೇಶನಕ್ಕೆ ಈ ಬಾರಿಯ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ದೊರೆತಿದೆ.
‘ಮೈ ಲಾರ್ಡ್ ನಾನಿದನ್ನು ಖಂಡಿಸ್ತೀನಿ, ಖಂಡಿಸ್ತೀನಿ, ಖಂಡಿಸ್ತೀನಿ!’ ಒಂದು ಕಾಲದಲ್ಲಿ ಪ್ರಥಮ್‌ನ ಈ ಡೈಲಾಗು ಕೇಳಿ ಹೆಚ್ಚಿನ ವರು ಲಾಗಾ ಹೊಡೆದು ನಗುತ್ತಿದ್ದರು. ಈ ಪುಣ್ಯಾತ್ಮ ಅದು ಹೇಗೆ ಇಷ್ಟೆ ಮಾತನಾಡ್ತಾನಪ್ಪಾ ಅಂತ ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿ ಪಡುತ್ತಿದ್ದರು. ನಿನ್ನೆವರೆಗೂ ಎಲ್ಲಿದ್ನಪ್ಪಾ ಈ ಮಾತಿನ ಮಾಂತ್ರಿಕ ಎಂದು ನಿಬ್ಬೆರಗಾಗುತ್ತಿದ್ದರು.
ಪ್ರಥಮ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಎಂಟ್ರಿ ಕೊಟ್ಟಿದ್ದು ಒಂದು ಕಡೆಯಾದರೆ, ಆ ಶೋವನ್ನು ಬರೀ ಮಾತಿನ ಛಾತಿ ಯಿಂದಲೇ ಗೆದ್ದಿದ್ದು ಇನ್ನೊಂದು ಅಚ್ಚರಿ ಪಡುವ ಸಂಗತಿ. ಬಿಗ್ ಬಾಸ್ ಅಷ್ಟು ಸುಲಭಕ್ಕೆ ಯಾರನ್ನೂ ಗೆಲುವಿನ ದಾರಿಯೆಡೆಗೆ ಕಳಿಸಿಕೊಡುವುದೇ ಇಲ್ಲ. ಅಂಥದ್ದ ರಲ್ಲಿ ಪ್ರಥಮ್ ಎನ್ನುವ ಟಾಕಿಂಗ್ ಟ್ಯಾಲೆಂಟ್ ಆ ಶೋವನ್ನು ಗೆದ್ದೇ ಬಿಡುತ್ತಾರೆ. ಮಾತಿನ ಮೂಲಕವೇ ಮನೆ ಮಾತಾಗುತ್ತಾರೆ. ಮಾತಿನ ಮೂಲಕವೇ ಮನೆಮನಗಳ ಓಟ್ ಪಡೆದು ಬಿಗ್ ಬಾಸ್ ವಿನ್ನರ್ ಎನಿಸಿಕೊಳ್ಳು ತ್ತಾರೆ!
ಕೈಯಲ್ಲಿ ಸಾಲುಸಾಲು ಚಿತ್ರಗಳಿವೆ!
ಫಸ್ಟ್ ನೈಟ್ ವಿತ್ ದೆವ್ವ, ಕರ್ನಾಟಕದ ಅಳಿಯ, ತೊಂಬತ್ತೊಂಬತ್ತು ಲಕ್ಷಕ್ಕೊಬ್ಬ ಸೇರಿದಂತೇ ಸಾಕಷ್ಟು ಚಿತ್ರಗಳು ಪ್ರಥಮ್ ಕೈಯಲ್ಲಿವೆ. ಸದ್ಯದ ಕೊಕೇನ್ ಎನ್ನುವ ಸಿನೆಮಾ ಸೆಟ್ಟೇರಲಿದ್ದು, ಆ ಚಿತ್ರದಲ್ಲಿ ಸಹ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸು ತ್ತಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಪ್ರಥಮ್ ನಿರೂಪಕರಾಗಿಯೂ ಕೆಲಸ ಮಾಡುತ್ತಿದ್ದು, ರಾಜಕೀಯ ಸಂಬಂಧಿ ಜನಾಭಿಪ್ರಾಯ ಪಡೆಯುವ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ಎಲ್ಲದರ ನಡುವೆ ಒಂದಷ್ಟು ಸಭೆ-ಸಮಾರಂಭ ಗಳಲ್ಲಿ ಭಾಗಿ, ಅಲ್ಲಿ ಬರುವ ಒಂದಷ್ಟು ಮೊತ್ತ ದಲ್ಲಿ ಒಂದಷ್ಟು ಬಡ ಕುಟುಂಬಗಳಿಗೆ ಧನ ಸಹಾಯ ಸೇರಿದಂತೇ ಪ್ರಥಮ್ ಯಾವಾಗಲೂ ಬ್ಯುಸಿ ಇರುತ್ತಾರೆ. ಒಂದ ಒಂದು ವೇದಿಕೆಗಳಲ್ಲಿ ಮಾತಿನ ಚಟಾಕಿ ಹಾರಿಸುತ್ತಲೇ ಇರುತ್ತಾರೆ. ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಲೇ ಇರುತ್ತಾರೆ!
ಕೊಳ್ಳೆಗಾಲದ ಹಲಗಪುರ ಮೂಲದವರಾದ ಪ್ರಥಮ, ಚಿಕ್ಕವಯಸ್ಸಿನಿಂದಲೂ ಆಶುಕವಿತೆ ಗಳನ್ನು ಬರೆದು ಹೆಸರು ಮಾಡಿದ್ದರು, ಬಹುಮಾನ ಪಡೆದಿದ್ದರು. ಬೆಳೆಯುವ ಸಿರಿ ಮೊಳಕೆ ಯಲ್ಲಿ ಎನ್ನುವಂತೇ ಇಡೀ ಊರಿಗೆ ಪ್ರಥಮ್ ಮಾತೆಂದರೆ ಇಷ್ಟವಾಗುತ್ತಿತ್ತು. ಮೈಸೂರಿನ ಟಿ ನರಸೀಪುರದಲ್ಲಿ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾಭ್ಯಾಸ ಮುಗಿಸಿರುವ ಪ್ರಥಮ್ ಸಿನೆಮಾ ನಿರ್ದೇಶನ ಮಾಡಬೇಕು ಎನ್ನುವ ಮಹದಾಸೆಯನ್ನು ವಿದ್ಯಾರ್ಥಿ ದಿಸೆಯ ಹೊಂದಿದ್ದರು!
ಪ್ರಥಮ್ ಅಭಿನಯದ ನಟ ಭಯಂಕರ ಚಿತ್ರದ ಅಭಿನಯ ಮತ್ತು ಯಶಸ್ವೀ ನಿರ್ದೇಶನಕ್ಕೆ ಈ ಬಾರಿಯ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ದೊರೆತಿದೆ. ದೂರದ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಮಹಾ ಸಮಾರಂಭದಲ್ಲಿ ಪ್ರಥಮ್ ಅವರಿಗೆ ಈ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು!
ಕೊಳ್ಳೇಗಾಲದ ಮಾತಿನ ಮಾಂತ್ರಿಕ!
ಪ್ರಥಮ್ ಮಾತಿನ ಶೈಲಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದೆ ಎಂದರೆ ಹೆಚ್ಚಿನ ಎಲ್ಲೋ ರಿಯಾಲಿಟಿ ಶೋಗಳಲ್ಲೂ ಪ್ರಥಮ್ ಅವರನ್ನು ಕರೆಸಿಕೊಂಡು ಅವರಿಂದ ಒಂದಷ್ಟು ಮನರಂಜನೆಯನ್ನು ಹೊರತೆಗೆಯುತ್ತಾರೆ. ಟಾಕ್ ಶೋಗಳಿರಬಹುದು, ಸಂದರ್ಶನ ಆಧಾರಿತ ಕಾರ್ಯ ಕ್ರಮಗಳಿರಬಹುದು, ರಿಯಾಲಿಟಿ ಶೋಗಳಿರಬಹುದು, ಇಲ್ಲಿಯವರೆಗೆ ಪ್ರಥಮ್ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳಿಗೆ ಗೆ ಆಗಿ ಹೋಗಿದ್ದಾರೆ. ಸ್ಟ್ಯಾಂಡಪ್ ಕಾಮಿಡಿ ಮಾಡುವ ಶೋಗಳಿಗೆ ತಮ್ಮ ಮಾತಿನ ಗಮ್ಮತ್ತು ತುಂಬಿ ಮತ್ತಷ್ಟು ಕಳೆ ತಂದಿದ್ದಾರೆ !