Advertisements

ವೈಟ್‌ಫೀಲ್ಡ್ ಆರ್ಟ್ ಕಲೆಕ್ಟಿವ್; ಏಳನೇ ಆವೃತ್ತಿ ಉದ್ಘಾಟನೆ

• ʼಗಡಿಗಳನ್ನು ಮೀರಿದʼ ಪರಿಕಲ್ಪನೆಯ ವೈಟ್‌ಫೀಲ್ಡ್ ಆರ್ಟ್ ಕಲೆಕ್ಟಿವ್‌ನ ಏಳನೇ ಆವೃತ್ತಿಯನ್ನು ಬೆಂಗಳೂರಿನ ವೈಟ್‌ಫೀಲ್ಡ್‌ನ ʼವಿಆರ್‌ ಬೆಂಗಳೂರುʼನಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು

ಬೆಂಗಳೂರು: ಯುಜ್ ಆರ್ಟ್ಸ್ ಫೌಂಡೇಷನ್‌ ಬೆಂಬಲದ ಸಾರ್ವಜನಿಕ ಕಲಾ ಉತ್ಸವ ʼವೈಟ್‌ಫೀಲ್ಡ್‌ ಆರ್ಟ್‌ ಕಲೆಕ್ಟಿವ್‌ʼ ನ ಏಳನೇ ಆವೃತ್ತಿಯನ್ನು ಶುಕ್ರವಾರ (ಏಪ್ರಿಲ್‌ 5) ಇಲ್ಲಿ ಉದ್ಘಾಟಿಸಲಾಯಿತು. ಈ ಕಲಾ ಉತ್ಸವದ ʼಗಡಿಗಳನ್ನು ಮೀರಿದʼ ಪರಿಕಲ್ಪನೆಯು, ಕಲಾವಿದರ ದೃಷ್ಟಿ, ಕಲ್ಪನೆ ಮತ್ತು ಕಲಾತ್ಮಕ ಪ್ರತಿಭೆಯನ್ನು ಪ್ರತಿಬಿಂಬಿಸುವ ನವೀನ ಕಲಾಕೃತಿಗಳು ಮತ್ತು ಶಿಲ್ಪಗಳನ್ನು ರಚಿಸಲು ಪ್ರೇರೇಪಿಸುತ್ತದೆ. ಒಂದು ತಿಂಗಳ ಕಾಲ ನಡೆಯುವ ಈ ಉತ್ಸವವನ್ನು ಖ್ಯಾತ ಕೊಳಲು ವಾದಕ ಮತ್ತು ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಪಂಡಿತ್‌ ಪ್ರವೀಣ್ ಗೋಡ್ಖಿಂಡಿ ಅವರು ಉದ್ಘಾಟಿಸಿದರು.

‘ಕಲಾ ಕಾರ’ ಅನಾವರಣ ಹಾಗೂ ಸಾಂಪ್ರದಾಯಿಕ ದೀಪ ಬೆಳಗಿಸುವ ಕಾರ್ಯಕ್ರಮದೊಂದಿಗೆ ಸಮಾರಂಭ ಆರಂಭವಾಯಿತು. ಅದರ ನಂತರ ವಿವೃತ್ತಿ ಡ್ಯಾನ್ಸ್ ಕಂಪನಿಯ ಕಲಾವಿದರ ‘ಸಂಗಮಂ’ ಶೀರ್ಷಿಕೆಯ ಸಮ್ಮೋಹನಗೊಳಿಸುವ ಶಾಸ್ತ್ರೀಯ ನೃತ್ಯ ಪ್ರದರ್ಶನ ಮತ್ತು ಪಂಡಿತ್‌ ಪ್ರವೀಣ್‌ ಗೋಡ್ಖಿಂಡಿ ಅವರ ಕೊಳಲು ವಾದನವು ಕೇಳುಗರನ್ನು ಹೊಸ ಭಾವಲೋಕಕ್ಕೆ ಕರೆದುಕೊಂಡು ಹೋಯಿತು.

ಉತ್ಸವದಲ್ಲಿ 100ಕ್ಕೂ ಹೆಚ್ಚು ಕಲಾ ಸ್ಥಾಪನೆಗಳು, ಶಿಲ್ಪಗಳು, ವರ್ಣಚಿತ್ರಗಳು ಮತ್ತು ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗು ತ್ತದೆ. ಕಲಾ ಸ್ಥಾಪನೆಗಳನ್ನು (ಆರ್ಟ್‌ ಇನ್‌ಸ್ಟಾಲೇಷನ್ಸ್‌) ಕರ್ನಾಟಕ ಚಿತ್ರಕಲಾ ಪರಿಷತ್ತು, ಬೆಂಗಳೂರು ಸ್ಕೂಲ್ ಆಫ್ ಡಿಸೈನ್ ವಿದ್ಯಾರ್ಥಿಗಳು ಮತ್ತು ಇತರ ಹಿರಿಯ ಕಲಾವಿದರು ಸಿದ್ಧಪಡಿಸಿದ್ದಾರೆ. ಯುನೆಸ್ಕೊ ಮತ್ತು ಐಕಾನಿಕ್ ವುಮೆನ್ ಪ್ರಾಜೆಕ್ಟ್‌ನಂತಹ ಸಂಸ್ಥೆಗಳ ಜೊತೆಗೆ ಸಾರಾ ಅರಕ್ಕಲ್ ಗ್ಯಾಲರಿ ಮತ್ತು ರೆಡ್ ಲೈನ್ ಗ್ಯಾಲರಿ- ವೈಟ್‌ಫೀಲ್ಡ್ ಆರ್ಟ್ ಕಲೆಕ್ಟಿವ್ ಜೊತೆಗೆ ಕೈಜೋಡಿಸಿವೆ. ಕಲಾ ಕಾರ್ ಅನ್ನು ಬಹುಬಗೆಯ ಕಲಾವಿದ ಪ್ರದೀಪ್ ಕುಮಾರ್ ಅವರ ಸಹಯೋಗದೊಂದಿಗೆ ರಚಿಸಲಾಗಿದೆ.

ಪ್ರದೀಪ್‌ ಕುಮಾರ್‌ ಅವರ ಸ್ಥಳೀಯ ಸಂಸ್ಕೃತಿಯಾದ ಲಂಬಾಣಿ ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ಕಥನ ರೂಪಗಳು ಮತ್ತು ಅಲಂಕಾರಿಕ ಸಂಗತಿಗಳಿಂದ ʼಕಲಾ ಕಾರ್‌ ಪ್ರೇರಿತವಾಗಿದೆ. ವಿಆರ್‌ ಬೆಂಗಳೂರುನಲ್ಲಿ ಪಾರ್ಕಿಂಗ್ ಪ್ರದೇಶದ ಗೋಡೆ ಗಳನ್ನು ಕಲಾ ಗ್ಯಾಲರಿಯಾಗಿ ಪರಿವರ್ತಿಸಲಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕಲಾಕೃತಿಗಳನ್ನು ಬೇಸ್ಮೆಂಟ್ ಆರ್ಟ್ ಪ್ರಾಜೆಕ್ಟ್ ಪ್ರದರ್ಶಿಸಿದೆ. ಮುಂದಿನ ತಿಂಗಳು ವಿಆರ್ ಬೆಂಗಳೂರು- ಕಲಾ ಸ್ಥಾಪನೆಗಳು, ಛಾಯಾಗ್ರಹಣ, ಪ್ರದರ್ಶನಗಳು, ಕಾರ್ಯಾಗಾರಗಳು, ಆರ್ಟ್ ಸಿನಿಮಾ ಸ್ಕ್ರೀನಿಂಗ್ ಮತ್ತು ಆರ್ಟ್ ಬಜಾರ್‌ಗಳೊಂದಿಗೆ ಕಲಾತ್ಮಕ ಆಚರಣೆಯ ಕೇಂದ್ರವಾಗಿ ಬದಲಾಗಲಿದೆ.

ವೈಟ್‌ಫೀಲ್ಡ್ ಆರ್ಟ್ ಕಲೆಕ್ಟಿವ್‌ನ ಕ್ಯುರೇಟರ್ ಸುಮಿ ಗುಪ್ತಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ಈ ಅದ್ಭುತವಾದ ಉತ್ಸವವನ್ನು ಅನಾವರಣಗೊಳಿಸುವುದು ನನಗೆ ಅಪಾರ ಸಂತೋಷವನ್ನು ತಂದಿದೆ. ಈ ಉತ್ಸವವು ದೊಡ್ಡ ಪ್ರಮಾಣದ ಸ್ಥಾಪನೆಗಳು, ಶಿಲ್ಪಗಳು, ಮಿಶ್ರ ಮಾಧ್ಯಮ ಕೃತಿಗಳು, ಛಾಯಾಗ್ರಹಣ, ಸಂಗೀತ ಮತ್ತು ನೃತ್ಯವನ್ನು ಪ್ರದರ್ಶಿಸುವ ಕಲಾವಿದರಿಗೆ ಸ್ಪೂರ್ತಿ ದಾಯಕ ವೇದಿಕೆಯನ್ನು ಸೃಷ್ಟಿಸುತ್ತದೆ. ವೈಟ್‌ಫೀಲ್ಡ್ ಆರ್ಟ್ ಕಲೆಕ್ಟಿವ್ 2024- ನಗರದ ಕಲೆ ಮತ್ತು ಸಂಸ್ಕೃತಿಯ ಸಂಭ್ರಮಾ ಚರಣೆಯಲ್ಲಿ ಕಲಾ ಅಭಿಜ್ಞರು, ಕಲಾ ವಿದ್ಯಾರ್ಥಿಗಳು ಮತ್ತು ಪೋಷಕರ ಸಮುದಾಯವನ್ನು ಮತ್ತು ಬೆಂಗಳೂರಿನ ಜನರನ್ನು ಒಟ್ಟುಗೂಡಿಸಲಿದೆ. ಇಂತಹ ಉತ್ಸವಗಳ ಮೂಲಕ ನಾವು ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆಯನ್ನಷ್ಟೇ ಒದಗಿಸುತ್ತಿಲ್ಲ. ಇದರ ಜೊತೆಗೆ, ನಗರದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಸೇರಿರುವ ಮತ್ತು ಗೌರವದ ಭಾವನೆಯನ್ನೂ ಪೋಷಿಸುತ್ತದೆʼ ಎಂದು ಹೇಳಿದ್ದಾರೆ.

ದೆಹಲಿಯಲ್ಲಿನ ಯುನೆಸ್ಕೊ ಕಚೇರಿಯ ಸಹಯೋಗದೊಂದಿಗೆ ವ್ಯವಸ್ಥೆ ಮಾಡಿರುವ ಬೆರಗುಗೊಳಿಸುವ ಛಾಯಾಚಿತ್ರ ಪ್ರದರ್ಶ ನವು ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಯುನೆಸ್ಕೊದ ಪ್ರಕಟಣೆಯಾಗಿರುವ ʼಎ ಬ್ರೈಡೆಡ್ ರಿವರ್: ದಿ ಯೂನಿ ವರ್ಸ್ ಆಫ್ ಇಂಡಿಯನ್ ವಿಮೆನ್ ಇನ್ ಸೈನ್ಸ್ʼ ಆಧರಿಸಿದ ಪ್ರದರ್ಶನವು ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿರುವ ಮಹಿಳಾ ವಿಜ್ಞಾನಿಗಳ ವರ್ಚಸ್ವಿ ಭಾವಚಿತ್ರಗಳನ್ನು ಒಳಗೊಂಡಿದೆ. ಈ ಪ್ರದರ್ಶನದ ಜೊತೆಗೆ, ಯುನೆಸ್ಕೊ ವೈಟ್‌ಫೀಲ್ಡ್ ಆರ್ಟ್ ಕಲೆಕ್ಟಿವ್‌ನಲ್ಲಿ ಸಂವಾದವನ್ನೂ ಆಯೋಜಿಸಲಿದೆ.

ʼಆಹಾರ, ನೀರು ಮತ್ತು ಇಂಧನ ಭದ್ರತೆಯ ಮೇಲೆ ಪ್ರಭಾವ ಬೀರುವ ಜೀವವೈವಿಧ್ಯದ ನಷ್ಟ, ಹವಾಮಾನ ಬದಲಾವಣೆ ಮತ್ತು ಮಾಲಿನ್ಯ ಒಳಗೊಂಡಂತೆ ಪೃಥ್ವಿ ಎದುರಿಸುತ್ತಿರುವ ಮೂರು ಬಗೆಯ ಬಿಕ್ಕಟ್ಟುಗಳಿಂದ ಉಂಟಾಗಿರುವ ಅಭೂತಪೂರ್ವ ಸವಾಲು ಗಳನ್ನು ಮನುಕುಲವು ಎದುರಿಸುತ್ತಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ನಾವೀನ್ಯತೆಗಳನ್ನು ಅಳವಡಿಸಿಕೊಳ್ಳುವ ಮೂಲಕ, ನಾವು ಈ ಬಿಕ್ಕಟ್ಟುಗಳ ತೀವ್ರತೆಯನ್ನು ತಗ್ಗಿಸಬಹುದು. ಮಹಿಳಾ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸಲಾಗುವುದು. ಈ ಮೂಲಕ ಮಹಿಳೆಯರ ಸಾಮೂಹಿಕ ಜಾಣ್ಮೆಯ ಸಾಮರ್ಥ್ಯ ಹೆಚ್ಚಳದ ನೆರವಿನಿಂದ ಮಾನವನ ಬದುಕುಳಿಯುವ ಸಾಧ್ಯತೆಗಳನ್ನು ಹೆಚ್ಚಿಸುವ ವಿಧಾನಗಳನ್ನು ಅನ್ವಯಿಸಲು ಸಹಾಯ ಮಾಡುತ್ತದೆ.

ʼಎ ಬ್ರೈಡೆಡ್ ರಿವರ್: ದಿ ಯೂನಿವರ್ಸ್ ಆಫ್ ಇಂಡಿಯನ್ ವಿಮೆನ್ ಇನ್ ಸೈನ್ಸ್ʼ ಗ್ರಂಥದ ಪ್ರಕಟಣೆಯು ಮತ್ತು ಪ್ರದರ್ಶನವು ಜಾಗತಿಕವಾಗಿ ವಿಜ್ಞಾನದಲ್ಲಿ ಮಹಿಳೆಯರಿಗೆ ಸಮಾನ ಗೌರವ, ಸಮಾನ ವೇತನ ಮತ್ತು ಉದ್ಯೋಗಗಳನ್ನು ಪಡೆಯಲು ವಿಶಾಲ ವಾದ ಸಾಮಾಜಿಕ ಪ್ರಯತ್ನಗಳನ್ನು ಉತ್ತೇಜಿಸುವ ಮತ್ತು ಪ್ರೇರೇಪಿಸುವ ಗುರಿ ಹೊಂದಿದೆ” ಎಂದು ಯುನೆಸ್ಕೊದ ದಕ್ಷಿಣ ಏಷ್ಯಾ ಪ್ರಾದೇಶಿಕ ಕಚೇರಿಯ ನಿರ್ದೇಶಕಿ ಮತ್ತು ಭೂತಾನ್, ಭಾರತ, ಮಾಲ್ಡೀವ್ಸ್ ಹಾಗೂ ಶ್ರೀಲಂಕಾದ ಯುನೆಸ್ಕೊದ ಪ್ರತಿನಿಧಿಯಾಗಿ ರುವ ಟಿಮ್ ಕರ್ಟಿಸ್ ಅವರು ಹೇಳಿದ್ದಾರೆ.

ಈ ಉತ್ಸವವು ವೈವಿಧ್ಯಮಯ ಕಲಾತ್ಮಕ ಅಭಿವ್ಯಕ್ತಿಗಳು, ಪ್ರತಿಭೆಗಳು ಮತ್ತು ಯೋಜನೆಗಳ ಕ್ರಿಯಾತ್ಮಕ ಸಂಗಮವಾಗಿದೆ. ಕಾದಂಬರಿ ಮಿಶ್ರಾ ಅವರ ಪ್ರಭಾವಶಾಲಿ “ಐಕಾನಿಕ್ ವುಮೆನ್ ಪ್ರಾಜೆಕ್ಟ್” ಇತಿಹಾಸದಲ್ಲಿನ ಬೆಳಕಿಗೆ ಬಾರದ ಮಹಿಳಾ ಸಾಧಕಿ ಯರನ್ನು ಛಾಯಾಗ್ರಹಣ ಮತ್ತು ಕಥೆ ಹೇಳುವ ಮೂಲಕ ಪರಿಚಯಿಸಲಿದೆ. ದಿವಂಗತ ಅಚ್ಯುತನ್ ಕೂಡಲ್ಲೂರ್ ಅವರ ಕೃತಿಗಳ ಸಿಂಹಾವಲೋಕನ, ಅಮೂರ್ತ ಕಲೆಯ ಮೇಲೆ ಅವರು ಬೀರಿರುವ ಶಾಶ್ವತ ಪ್ರಭಾವಕ್ಕೆ ಗೌರವ ಸಲ್ಲಿಸಲಾಗುವುದು. ಜೊತೆಗೆ ಸೃಜನಶೀಲತೆ ಮತ್ತು ಪರಂಪರೆಯ ಆಳವಾದ ಅನ್ವೇಷಣೆ ನೀಡಲಾಗುವುದು. ಹೆಚ್ಚುವರಿಯಾಗಿ, ಗೀತಾ ಹಡ್ಸನ್ ಅವರ ಕಲಾ ಪ್ರದರ್ಶನ, ಅಸ್ಮಾ ಮೆನನ್ ಜಮಾಲ್, ಜೇಕಬ್ ಜೆಬರಾಜ್, ಕವಿತಾ ಪ್ರಸಾದ್, ಶೈಲೇಶ್ ಬಿಒ ಮತ್ತು ತೇಜೋಮಯೆ ಮೆನನ್ ಅವರು ತಮ್ಮದೇ ಆದ ಶೈಲಿ ಹಾಗೂ ದೃಷ್ಟಿಕೋನಗಳ ವಿಶಿಷ್ಟ ಕಲಾಕೃತಿಗಳೊಂದಿಗೆ ಈ ಉತ್ಸವವನ್ನು ಶ್ರೀಮಂತಗೊಳಿಸ ಲಿದ್ದಾರೆ.

ಅನುಭವಿ ಛಾಯಾಗ್ರಾಹಕರು ಮತ್ತು ಉದಯೋನ್ಮುಖ ಪ್ರತಿಭಾನ್ವಿತರು ಸೆರೆ ಹಿಡಿದಿರುವ ನಗರದ ಆಕರ್ಷಕ ಛಾಯಾಚಿತ್ರ ಗಳನ್ನು ಪ್ರದರ್ಶಿಸುವ “ಬೆಂಗಳೂರು ಇನ್ ಫೋಕಸ್” ಇನ್ನೊಂದು ಆಕರ್ಷಣೆ ಆಗಿರಲಿದೆ. ಮಿಲಿಯನ್ ಡ್ರೀಮ್ಸ್ ಮತ್ತು ಸ್ನಗಲ್ಸ್‌ ಮೂಲಕ ಯುವ ಕಲಾವಿದರ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ವಿವಿಧ ಕಲಾತ್ಮಕ ಮಾಧ್ಯಮಗಳ ಮೂಲಕ ತಮ್ಮನ್ನು ತಾವು ಅನ್ವೇಷಿಸಲು ಮತ್ತು ತಮ್ಮ ಕಲಾಕೌಶಲವನ್ನು ಅಭಿವ್ಯಕ್ತಪಡಿಸಲು ಅವಕಾಶಗಳನ್ನು ಒದಗಿಸಲಿದೆ. ವೈಟ್‌ಫೀಲ್ಡ್ ಆರ್ಟ್ ಕಲೆಕ್ಟಿವ್- ಕಲಾತ್ಮಕ ಸಿನಿಮಾಗಳ ಪ್ರದರ್ಶನಕ್ಕೆ ಪಿವಿಆರ್‌ ಸಿನಿಮಾಸ್‌ ಮತ್ತು ಕಾಫಿ ತಯಾರಿಸುವ ಕಲೆ ಕಲಿಯಲು ಬ್ಲೂ ಟೋಕೈ ಕಾಫಿ ರೋಸ್ಟರ್‌ ಜೊತೆಗೆ ಸಹಯೋಗ ಹೊಂದಿದೆ. ಆರ್ಟ್ ಬಜಾರ್ – ಸ್ಥಳೀಯ ಕಲಾವಿದರು ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸುವ ಮೂಲಕ ತಮ್ಮ ಪ್ರೇಕ್ಷಕರ ಜೊತೆಗೆ ಸಂವಹನ ನಡೆಸಲು ಮಾರುಕಟ್ಟೆ ಅವಕಾಶವನ್ನು ಒದಗಿಸಲಿದೆ.

ವೈಟ್‌ಫೀಲ್ಡ್ ಆರ್ಟ್ ಕಲೆಕ್ಟಿವ್ ಅನ್ನು 2016 ರಲ್ಲಿ ಸ್ಥಾಪಿಸಲಾಯಿತು. ಇದು ಬೆಂಗಳೂರಿನ ವೈವಿಧ್ಯಮಯ ಕಲಾತ್ಮಕ ಅಭಿವ್ಯಕ್ತಿಗಳ ರೋಚಕ ಪ್ರದರ್ಶನವಾಗಿದೆ. ಇದು ಯುಜ್ ಆರ್ಟ್ಸ್ ಫೌಂಡೇಷನ್‌ನಿಂದ ಬೆಂಬಲಿತವಾಗಿದೆ. ವಿಆರ್ ಬೆಂಗಳೂರು-ನ ಕನೆಕ್ಟಿಂಗ್ ಕಮ್ಯುನಿಟೀಸ್© ಉಪಕ್ರಮದ ಭಾಗವಾಗಿದೆ. ಇದು ನಾಗರಿಕ ಹೆಮ್ಮೆ ಉತ್ತೇಜಿಸಲು, ಸ್ಥಳೀಯ ಆರ್ಥಿಕತೆ ಬಲಪಡಿಸಲು ಮತ್ತು ನಗರದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವರ್ಚಸ್ಸು ಹೆಚ್ಚಿಸುವ ಗುರಿ ಹೊಂದಿದೆ.

Leave a Comment

Advertisements

Recent Post

Live Cricket Update